ಸಾಲಿಹಾತ್ ಪಿಯು ಕಾಲೇಜಿನ ಪ್ರತಿನಿಧಿ ಸರಕಾರ ಉದ್ಘಾಟನೆ

Update: 2023-07-21 13:42 GMT

ಉಡುಪಿ, ಜು.21: ತೋನ್ಸೆ ಹೂಡೆ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪ್ರತಿನಿಧಿ ಸರಕಾರದ ಉದ್ಘಾಟನಾ ಕಾರ್ಯಕ್ರಮ ಇತ್ತಿಚಿಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜನಸೇವಾ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಮಾತನಾಡಿ, ವಿದ್ಯಾರ್ಥಿ ಸರಕಾರ ರಚನೆಯು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಹಾಗೂ ವ್ಯವಸ್ಥೆ ಗಳನ್ನು ಅರಿತು ಕೊಳ್ಳಲು ಒಂದು ಹಂತದ ತರಬೇತಿಯ ಭಾಗವಾಗಿದೆ. ಪ್ರಸಕ್ತ ವಿದ್ಯಾಮಾನಗಳಿಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಕ್ರೀಯಾಶೀಲ ಆಗಿರಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿರುವ ಚುನಾವಣಾ ಆಯೋಗ ನಡೆಸುವ ಚುನಾವಣೆಯ ಮಾದರಿಯಲ್ಲಿಯೇ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಸ ಲಾಗಿತ್ತು. ವಿವಿಧ ಖಾತೆ ಹೊಂದಿರುವ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.‌

ಕಾಲೇಜಿನ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಪ್ರೇರಣಾ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ದಿವ್ಯ ಪೈ, ಸ್ಥಳೀಯ ಗ್ರಾಪಂ ಸದಸ್ಯೆ ಮುಮ್ತಾಜ್, ಕಾಲೇಜಿನ ಸಿಪಿಎಲ್ ಆಯಿಶ ಸ್ವಾಲಿಹ ಹಾಗೂ ಎಸಿಪಿಎಲ್ ಆಯಿಶ ನದ ಉಪಸ್ಥಿತರಿದ್ದರು. ಆಯಿಶ ಫೌಝಿಯಾ ಪ್ರಾರ್ಥನೆಗೈದರು. ತಸ್ಮಿಯ ಸ್ವಾಗತಿಸಿದರು. ಮುಬಾರಕ್ ವಂದಿಸಿದರು. ಆಯಿಶ ಅಜ್ವ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News