ಮಕ್ಕಳ ರೋಗಗಳ ಚಿಕಿತ್ಸೆಯ ಕುರಿತು ಮಾಹಿತಿ ಕಾರ್ಯಗಾರ

Update: 2023-11-04 11:20 GMT

ಮಣಿಪಾಲ : ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಹಯೋಗದೊಂದಿಗೆ ಸರಕಾರಿ ವೈದ್ಯರಿಗೆ ಮಕ್ಕಳ ರೋಗಗಳ ಚಿಕಿತ್ಸೆಯ ಇತ್ತೀಚಿನ ವಿಧಾನಗಳ ಕುರಿತ ಕಾರ್ಯಾಗಾರವನ್ನು ಶನಿವಾರ ಮಣಿಪಾಲದ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಗಾರವನ್ನು ಉದ್ಘಾಟಿಸಿದ ಮಣಿಪಾಲ ಕೆಎಂಸಿಯ ಸಹ ಡೀನ್ ಡಾ.ಕಾಂತಿ ಲತಾ ಪೈ ಮಾತನಾಡಿ, ವೈದ್ಯಕೀಯ ಚಿಕಿತ್ಸೆಗಳ ಇತ್ತೀಚಿನ ಕೌಶಲ್ಯ ಗಳು ಹಾಗೂ ಮಾರ್ಗದರ್ಶನಗಳನ್ನು ಪದೇ ಪದೇ ಅವಲೋಕಿಸಿ ತರಬೇತಿ ಪಡೆಯುವ ಮೂಲಕ ಸಮುದಾಯದ ಜನರ ಬಹುತೇಕ ಕಾಯಿಲೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲು ತುಂಬಾ ಸಹಾಯಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಆರ್‌ಸಿಎಚ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಗ್ರಾಮೀಣ ಪ್ರದೇಶ ಗಳಲ್ಲಿ ಜನರಿಗೆ ಅವರ ವಾಸಸ್ಥಾನದ ಸಮೀಪದಲ್ಲೇ ಉತ್ತಮ ಗುಣಮಟ್ಟದ ಸೇವೆ ನೀಡಲು ಇಂತಹ ತರಬೇತಿ ಕಾರ್ಯ ಕ್ರಮಗಳು ಪ್ರಯೋಜನಕಾರಿಯಾಗಿದೆ. ಇದರಿಂದ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಮತ್ತು ಮಕ್ಕಳ ಆರೋಗ್ಯ ಕರ ಭವಿಷ್ಯವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸರಕಾರಿ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಶ್ ಮಾತನಾಡಿದರು. ಕೆಎಂಸಿಯ ಪಿಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೋಲಜಿ ವಿಭಾಗ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ., ಕೆಎಂಸಿ ವೀಕ್ಷಕ ಡಾ.ಸಂದೀಪ್, ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಡಾ.ಲೆಸ್ಲಿ ಎಡ್ವರ್ಡ್ ಎಸ್.ಲೂಯಿಸ್. ಸ್ವಾಗತಿಸಿದರು. ಡಾ.ದಿಶಾ ದಿವಾಕರ ವಂದಿಸಿದರು. ಡಾ.ಅಫ್ರಾಜ್ ಜಹಾನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ಸುಮಾರು 110 ವೈದ್ಯರು ಭಾಗವಹಿಸಿದ್ದರು.

ಮಕ್ಕಳ ಚಿಕಿತ್ಸೆಯ ಇತ್ತೀಚಿನ ಕ್ರಮಗಳ ಕುರಿತು ಮಕ್ಕಳ ವಿಭಾಗದಿಂದ ಡಾ. ಪುಷ್ಪಾಕಿಣಿ, ಡಾ.ಸುನೀಲ್ ಮುಂಡ್ಕೂರು, ಡಾ.ಸಂದೀಪ್ ಕುಮಾರ್, ಡಾ. ಸಂದೇಶ್ ಕಿಣಿ, ಡಾ.ಕರೆನ್ ಮೊರಾಸ್, ಡಾ.ಕೌಶಿಕ್ ಉರಾಳ್, ಡಾ. ಅಮೃತಾ ವರ್ಶಿಣಿ, ಡಾ.ಎ.ಬಾಳಿಗಾ ಮೆಮೊರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ಭಂಡಾರಿ ಹಾಗೂ ಮೂತ್ರಪಿಂಡ ಶಾಸ್ತ್ರ ವಿಭಾಗದ ಡಾ. ದರ್ಶನ್ ಆರ್. ಮಾಹಿತಿ ನೀಡಿದರು. ಬಳಿಕ ಗುಂಪು ಚರ್ಚೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News