ಜು.26: ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2024-07-24 06:57 GMT

ಉಡುಪಿ: ಉಡುಪಿ ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್, ಜಯಂಟ್ಸ್ ಬ್ರಹ್ಮಾವರ, ಉಡುಪಿ ವೈದ್ಯಕೀಯ ಪ್ರತಿನಿಧಿಗಳ ಸಂಘ, ಅಜ್ಜರಕಾಡು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಿಷನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಜು.26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಆಯೋಜಿಸಲಾಗಿದೆ.

ಶಿಬಿರದಲ್ಲಿ ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ದಂತ, ಸಾಮಾನ್ಯ ಆರೋಗ್ಯ, ಹಾಗೂ ಮಧುಮೇಹ ತಪಾಸಣೆ ಶಿಬಿರ ಉಚಿತವಾಗಿ ನಡೆಯಲಿದ್ದು, ಮಿಷನ್ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ದೀಪಾ ವೈ. ರಾವ್, ಡಾ.ಪವಿತ್ರಾ, ಡಾ.ಅಕ್ಷತಾ ರಾವ್, ಪ್ರಸೂತಿ ತಜ್ಞರು ಡಾ.ಆರ್ಥರ್ ರೋಡ್ರಿಗಸ್, ನೇತ್ರ ಡಾ.ಅರ್ಜುನ್ ಬಳ್ಳಾಲ್, ಕೀಲು ಮತ್ತು ಎಲುಬು ಡಾ.ಧನಂಜಯ್ ಭಟ್, ಡಾ.ಗಣೇಶ್ ಕಾಮತ್, ಸಾಮಾನ್ಯ ಆರೋಗ್ಯ ತಜ್ಞರು ಡಾ.ನಾಗೇಶ್ ನಾಯಕ್, ಡಾ.ಸಾರಿಕಾ, ದಂತ ತಜ್ಞರು ಭಾಗವಹಿಸಲಿರುವರು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News