ಕೊಲ್ಲೂರು ದೇವಳದ ನವರಾತ್ರಿ ಉತ್ಸವ ರಥದ ಹೂವಿನ ಅಲಂಕಾರಕ್ಕೆ ಬಂದಿದ್ದ ವ್ಯಕ್ತಿ ಕಾಣೆ
ಕೊಲ್ಲೂರು, ಅ.25: ತಮಿಳುನಾಡಿನಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನವರಾತ್ರಿಯ ರಥದ ಹೂವಿನ ಅಲಂಕಾರ ಕೆಲಸ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.
ತಮಿಳುನಾಡು ತಿರುವಣಮಲೈ ಮೂಲದ ಷಣ್ಮುಗಂ ಕೆ.(70) ಕಾಣೆಯಾದ ವ್ಯಕ್ತಿ.
ಅ.22ರಂದು ವಿಜಯರಾಜ್ ಎಲ್. ಎಂಬವರ ಜೊತೆ ಷಣ್ಮುಗಂ ಕೆ. ಕೊಲ್ಲೂರು ದೇವಸ್ಥಾನದ ತೇರಿನ ಹೂ ಅಲಂಕಾರ ಕೆಲಸಕ್ಕೆ ಬಂದಿದ್ದು, ವಸತಿ ಗೃಹದಲ್ಲಿ ತಂಗಿದ್ದರು. ಅ.23ರ ಮುಂಜಾನೆ ವೇಳೆ ಷಣ್ಮುಗಂ ಕೆ. ತನಗೆ ಸುಸ್ತಾಗುತ್ತಿದೆ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿ ಕೊಲ್ಲೂರು ದೇವಸ್ಥಾನದಿಂದ ಹೊರಟಿದ್ದರೆನ್ನಲಾಗಿದೆ. ಆದರೆ ಬಳಿಕ ವಸತಿ ಗೃಹದಲ್ಲಿ ಇಲ್ಲದೇ ಕಾಣೆಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಕೋಲು ಮುಖ, ಗೋಧಿ ಮೈಬಣ್ಣ, ಎತ್ತರ-5.6 ಇಂಚು, ತಿಳಿ ಹಳದಿ ಬಣ್ಣದ ಅರ್ಧ ಕೈ ಶರ್ಟ್, ಕೆಂಪು ಬಣ್ಣದ ಲುಂಗಿ ಧರಿಸಿದ್ದರು.