ಕೋಟ | ಜುಗಾರಿ ಅಡ್ಡೆಗೆ ದಾಳಿ: 24 ಮಂದಿಯ ಬಂಧನ: ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
Update: 2023-08-06 06:26 GMT
ಕೋಟ, ಆ.6: ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್ ಬಳಿ ಇರುವ ವಿನಾಯಕ ಸಭಾಂಗಣದಲ್ಲಿ ಶನಿವಾರ ರಾತ್ರಿ ವೇಳೆ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಕೋಟ ಪೊಲೀಸರು, ಒಟ್ಟು 24 ಮಂದಿಯನ್ನು ಬಂಧಿಸಿ ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವರಾಜ, ವಿಷ್ಣು ಕೆ.ವಿ., ದಿನೇಶ್, ಕೆ. ವಿನಾಯಕ, ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ, ಇ.ಅ್ಯಂಟನಿ ಮಸ್ಕರೇನಸ್, ಶೃತಿರಾಜ್, ರಘು, ಹುಸೇನ್, ಸಂದೇಶ್, ರಾಜು ಮೊಗೇರ, ಅಬ್ದುಲ್ ಮುನೀರ್, ಸಲ್ಮಾನ್, ಗೋಪಾಲ, ಗಣೇಶ್, ಮಿಥುನ್, ಸುಧರ್ಮ, ಕಮಲಾಕ್ಷ ಸುಧಾಕರ ಬಂಧಿತ ಆರೋಪಿಗಳು.
ಇವರಿಂದ 1,49,680 ರೂ. ನಗದು, ಮೂರು ಸ್ಟೀಲ್ ಟೇಬಲ್ಗಳು, 24 ಪ್ಲಾಸ್ಟಿಕ್ ಕುರ್ಚಿಗಳು, ಮೂರು ಕಾರು, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 8,27,580 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.