ಮಲ್ಪೆ: ಸ್ತನ ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮ

Update: 2023-10-27 12:56 GMT

ಮಲ್ಪೆ, ಅ.27: ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ, ಮಲ್ಪೆಯ ನಗರ ಆರೋಗ್ಯ ತರಬೇತಿ ಕೇಂದ್ರದ ವತಿಯಿಂದ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸ್ತನ ಕ್ಯಾನ್ಸರ್ ಕುರಿತ ಮಾಹಿತಿ ಕಾರ್ಯಕ್ರಮವನ್ನು ಗುರುವಾರ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಯರು ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮವನ್ನು ನಿವೃತ್ತ ತಹಶಿಲ್ದಾರ್ ಗೋಪಾಲ ಪೂಜಾರಿ ಉದ್ಘಾಟಿಸಿದರು. ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೇಷ್ಮಾ ಅಧ್ಯಕ್ಷತೆ ವಹಿಸಿದ್ದರು.

ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ನಗರ ಆರೋಗ್ಯ ತರಬೇತಿ ಕೇಂದ್ರದ ಮಹಿಳಾ ವೈದ್ಯಾಧಿಕಾರಿ ಡಾ.ಅಖಿಲಾ ಸ್ತನ ಕ್ಯಾನ್ಸರ್‌ನ ಲಕ್ಷಣಗಳು, ಅದನ್ನು ಪತ್ತೆ ಹಚ್ಚುವಿಕೆ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರೆ, ಸ್ವಯಂ ಸ್ತನ ತಪಾಸಣೆ ಮಾಡುವ ವಿಧಾನಗಳ ಕುರಿತು ವೈದ್ಯಾಧಿಕಾರಿ ಡಾ.ಅಪ್ರೋಜ್ ಮಾಹಿತಿ ನೀಡಿದರು.

ಡಾ.ಸುಚರಿತಾ, ಡಾ.ಅಂಜಿತಾ, ಡಾ.ಸತ್ಯಾನಿತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್.ಎಚ್.ವಿ ಕುಸುಮಾ, ಸಮು ದಾಯ ವೈದ್ಯಕೀಯ ವಿಭಾಗದ ವೈದ್ಯಕೀಯ ಸಮಾಜ ಸೇವಕಿ ನೀಲಾವತಿ, ಆರೋಗ್ಯ ಸಹಾಯಕಿಯರಾದ ಸುಲೋಚನಾ, ಲವೀನಾ ಸಿಬ್ಬಂದಿಗಳಾದ ನಾಗೇಶ್, ಕಮಲಾ, ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News