ಮಲ್ಪೆ, ಕಾಪು, ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ

Update: 2023-10-04 09:00 GMT

ಉಡುಪಿ, ಅ.4: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್ಕ್ರಾಸ್ಘಟಕ ಮತ್ತು ರೋಟರ್ಯಾಕ್ಟ್ ಘಟಕಗಳ ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ ಮತ್ತು ಗಾಂಧಿ ಜಯಂತಿಯ ಅಂಗವಾಗಿ ಎರಡು ದಿನಗಳ ಕಾಲ ಮಲ್ಪೆ, ಕಾಪು ಮತ್ತು ಕೋಡಿ ಸಮುದ್ರತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.

ಸಮುದ್ರ ತೀರದಲ್ಲಿ 800 ಮೀಟರ್ ವಿಸ್ತಾರದ ಜಾಗವನ್ನು ಸ್ವಚ್ಛತೆಗಾಗಿ ಆಯ್ಕೆ ಮಾಡಲಾಯಿತು. ಕಡಲ ತೀರದಲ್ಲಿ ಜೈವಿಕ ವಿಘಟನೀಯವಲ್ಲದ ವಸ್ತುಗಳು, ಪಾದರಕ್ಷೆಗಳು, ಗಾಜಿನ ಬಾಟಲಿಗಳು, ಪಾಲಿಥಿನ್ ಚೀಲಗಳು ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಮತ್ತು ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಶುಭ ಹಾರೈಸಿದರು.

300ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರು, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್ ಘಟಕ ಮತ್ತು ರೋಟರ್ಯಾಕ್ಟ್ ಘಟಕಗಳ ಸಂಯೋಜಕ ನಾಗರಾಜ್ ರಾವ್, ಸದಸ್ಯರಾದ ರಘುನಾಥ್, ಗಣೇಶ್ ಪ್ರಸಾದ್, ಜಯರಾಮ್ ನಾಯಕ್, ಡೀನ್ ಡಾ.ಸುದರ್ಶನ್ ರಾವ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ರವಿ ಪ್ರಭಾ, ಡಾ.ಮಂಜುನಾಥ್, ದೈಹಿಕ ಶಿಕ್ಷಣ ನಿರ್ದೇಶಕ ಪೌಲ್ ಸೂರಜ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News