ಮಲ್ಪೆ| ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆ: ಪ್ರಕರಣ ದಾಖಲು

Update: 2024-09-15 21:12 IST
ಮಲ್ಪೆ| ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆ: ಪ್ರಕರಣ ದಾಖಲು
  • whatsapp icon

ಮಲ್ಪೆ, ಸೆ.15: ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆದ ಗಣೇಶ ಮೆರವಣಿಗೆಯಲ್ಲಿ ತಡರಾತ್ರಿ ಡಿಜೆ ಧ್ವನಿ ವರ್ಧಕ ಬಳಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆಯ ಕುಮಾರ್ ಸೌಂಡ್ ಸಿಸ್ಟಂನ ಮಾಲಕ ಪ್ರಕಾಶ್ ಸೆ.13ರಂದು ರಾತ್ರಿ 11ಗಂಟೆಗೆ ಯಾವುದೇ ಅನುಮತಿ ಪಡೆಯದೇ ಲಾರಿಯಲ್ಲಿ ಡಿ.ಜೆ ದ್ವನಿವರ್ಧಕವನ್ನು ಬಳಸಿ ನಿಯಮ ಉಲ್ಲಂಘಿಸಿದ್ದು, ಈ ಮೂಲಕ ಸಾರ್ವಜನಿಕವಾಗಿ ತೊಂದರೆ ಉಂಟು ಮಾಡಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News