ಬಾತ್ರೂಮಿನಲ್ಲಿ ವಿದ್ಯುತ್ ಶಾಕ್ನಿಂದ ವ್ಯಕ್ತಿ ಮೃತ್ಯು
Update: 2023-09-04 15:30 GMT
ಕುಂದಾಪುರ, ಸೆ.4: ಬಾತ್ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ನಿಂದ ಮೃತಪಟ್ಟ ಘಟನೆ ಸೆ.3ರಂದು ರಾತ್ರಿ ವೇಳೆ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ನೇರಳಕಟ್ಟೆ ನಿವಾಸಿ ವೆಂಕಟೇಶ ಗಾಣಿಗ(65) ಎಂದು ಗುರುತಿಸ ಲಾಗಿದೆ. ಇವರು ಬಾತ್ರೂಮಿನಲ್ಲಿ ಸ್ನಾನ ಮಾಡುತ್ತಿರುವಾಗ ವಿದ್ಯುತ್ ಶಾಕ್ನಿಂದ ಹೊಡೆದು ಬಿದ್ದರೆನ್ನಲಾಗಿದೆ. ಕೂಡಲೇ ಬಾಬು ಗಾಣಿಗ ಹಾಗೂ ಸಮಿತ್ನೊಂದಿಗೆ ಹೋಗಿ ಎತ್ತಿದ್ದು, ಆಗ ಇವರಿಬ್ಬರಿಗೂ ವಿದ್ಯುತ್ ಶಾಕ್ ಹೊಡೆಯಿತ್ತೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ವೆಂಕಟೇಶ್ ಗಾಣಿಗ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.