ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್: ರೈಲು ಸಂಚಾರ ವೇಳೆಯಲ್ಲಿ ಅಲ್ಪ ಬದಲಾವಣೆ

Update: 2024-08-23 16:00 GMT

ಉಡುಪಿ, ಆ.23: ಆಗಸ್ಟ್ 24ರಿಂದ ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ರೈಲು ನಂ.06602ರ ಸಂಚಾರ ವೇಳೆಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ.

ತೋಕೂರು ಹಾಗೂ ಬಾರಕೂರು ನಡುವೆ ಸಂಚರಿಸುವ ವೇಳೆ ಈ ಬದಲಾವಣೆಯಾಗಲಿದೆ. ತೋಕೂರಿಗೆ ಬೆಳಗ್ಗೆ 6:40ಕ್ಕೆ ಬದಲು 6:15ಕ್ಕೆ ಆಗಮಿಸುವ ರೈಲು 6.17ಕ್ಕೆ ಅಲ್ಲಿಂದ ನಿರ್ಗಮಿಸಲಿದೆ.

ಮುಂದೆ ಸುರತ್ಕಲ್‌ಗೆ 6:27ಕ್ಕೆ ಬಂದು 6:28ಕ್ಕೆ, ಮುಲ್ಕಿಗೆ 6:40ಕ್ಕೆ ಬಂದು 6:41ಕ್ಕೆ., ನಂದಿಕೂರಿಗೆ 6:51ಕ್ಕೆ ಬಂದು 6:52ಕ್ಕೆ, ಪಡುಬಿದ್ರಿಗೆ 7:0್ಕ್ಕ2 ಬಂದು 7:03ಕ್ಕೆ, ಇನ್ನಂಜೆಗೆ 7:14ಕ್ಕೆ ಬಂದು 7:15ಕ್ಕೆ, ಉಡುಪಿಗೆ 7:30ಕ್ಕೆ ಬಂದು 7:31ಕ್ಕೆ ಹಾಗೂ ಬಾರಕೂರಿಗೆ 7:42ಕ್ಕೆ ಆಗಮಿಸಿ 7:43ಕ್ಕೆ ನಿರ್ಗಮಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News