ಮಣಿಪಾಲ: ಎಂಐಟಿಯ ಇಬ್ಬರು ಪ್ರಾಧ್ಯಾಪಕರಿಗೆ ಅಂತಾರಾಷ್ಟ್ರೀಯ ಗೌರವ

Update: 2023-07-27 14:29 GMT

ಡಾ.ನರೇಂದ್ರ ಖತ್ರಿ, ಡಾ.ನೀರಜ್‌ಕುಮಾರ್

ಮಣಿಪಾಲ: ಇಲ್ಲಿನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಇಬ್ಬರು ಸಹಾಯಕ ಪ್ರಾಧ್ಯಾಪಕರಾದ ಡಾ.ನರೇಂದ್ರ ಖತ್ರಿ ಹಾಗೂ ಡಾ.ನೀರಜ್ ಕುಮಾರ್ ಇವರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಅತ್ಯುತ್ತಮ ಸಂಶೋಧನಾ ಪ್ರಬಂಧಕ್ಕಾಗಿ ಗೌರವಿಸಲ್ಪಟ್ಟಿದ್ದಾರೆ.

ದುಬೈಯ ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ಸಿಐ ಹಾಗೂ ಕೆಇ ವಿಷಯದ ಮೇಲೆ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ನರೇಂದ್ರ ಖತ್ರಿ ಅವರು ಮಂಡಿಸಿದ ಪ್ರಬಂಧ ಅತ್ಯುತ್ತಮ ಪೇಪರ್ ಅವಾರ್ಡ್‌ಗೆ ಪಾತ್ರವಾಯಿತು. ವಿಶ್ವದಾದ್ಯಂತದಿಂದ ಬಂದ ಅಗ್ರಶ್ರೇಣಿಯ ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಇದರಲ್ಲಿ ಪಾಲ್ಗೊಂಡಿದ್ದರು.

ಡಾ. ನೀರಜ್ ಕುಮಾರ್ ಅವರು ಭೋಪಾಲ್‌ನ ಮೌಲಾನಾ ಆಝಾದ್ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಲಾದ ಮರು ಬಳಕೆಯ ಇಂಧನ ಹಾಗೂ ಸುಸ್ಥಿರ ಇ-ಮೊಬಿಲಿಟಿ ಕುರಿತ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಅತ್ಯುತ್ತಮ ಪ್ರಬಂಧವೆಂದು ಪರಿಗಣಿತವಾಗಿ ಪ್ರಶಸ್ತಿಗೆ ಬಾಜನವಾಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅಂಗ ಸಂಸ್ಥೆಯಾದ ಎಂಐಟಿಯ ನಿರ್ದೇಶಕ ಕಮಾಂಡರ್ (ಡಾ) ಅನಿಲ್ ರಾಣಾ ಅವರು ಡಾ. ನರೇಂದ್ರ ಖಾತ್ರಿ ಮತ್ತು ಡಾ. ನೀರಜ್ ಅವರ ಗಮನಾರ್ಹ ಸಾಧನೆಗಳನ್ನು ಪ್ರಶಂಸಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News