ಉಡುಪಿ ಜಿಲ್ಲಾಮಟ್ಟದ ಮದ್ರಸಧ್ಯಾಪಕರ ‘ಮುಅಲ್ಲಿಮ್ ಸಮ್ಮೇಳನ’
ಉಡುಪಿ: ಎಳೆಯ ಮಕ್ಕಳಿಗೆ ಶಿಕ್ಷಣ ನೀಡುವ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಶ್ರಮಿಸುವ ಮದ್ರಸದ ಅಧ್ಯಾಪಕರು ನಿಜವಾದ ಸಮಾಜ ಸುಧಾರಕರು ಎಂದು ಮದ್ರಸಧ್ಯಾಪಕರ ಒಕ್ಕೂಟದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಕೆ.ಎಂ.ಕಾಮಿಲ್ ಸಖಾಫಿ ಹೇಳಿದ್ದಾರೆ.
ಸುನ್ನೀ ಜಂಇಯ್ಯುತುಲ್ ಮುಅಲ್ಲಿಮೀನ್(ಎಸ್‌ಜೆಎಂ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕಾಪು ಚಂದ್ರನಗರ ಬಟರ್ ಫ್ಲೈ ಗೆಸ್ಟ್ ಹೌಸ್‌ನಲ್ಲಿ ಸೋಮವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಮದ್ರಸಧ್ಯಾಪಕರ ಮುಅಲ್ಲಿಮ್ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಎಸ್‌ಜೆಎಂ ಕೇಂದ್ರ ಸಮಿತಿ ಅಧ್ಯಕ್ಷ ಸಯ್ಯಿದ್ ಅಲಿ ಬಾಫಖೀ ತಂಳ್ ಕೊಯಿಲಾಂಡಿ ವಹಿಸಿದ್ದರು. ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್ ಕೋಟೇಶ್ವರ ಶುಭಕೋರಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ಜೆಎಂ ಕೇಂದ್ರ ಸಮಿತಿ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಕುಂಞಿಕುಳಮ್ ‘ಮದ್ರಸ ಶಿಕ್ಷಣದ ಆಧನಿಕರಣ’ ಹಾಗೂ ಚೆರೂಪ ಬಶೀರ್ ಮುಸ್ಲಿಯಾರ್ ‘ಮಕ್ಕಳ ಹಕ್ಕು ಮತ್ತು ಕಾನೂನು ಕುರಿತು ವಿಷಯ ಮಂಡಿಸಿದರು.
ಕಾರ್ಯದರ್ಶಿಗಳಾದ ಉಮರ್ ಮದನಿ ಪಾಲಕ್ಕಾಡ್, ವಿ.ವಿ.ಅಬೂಬಕರ್ ಸಖಾಫಿ ಕಣ್ಣೂರು, ಸಯ್ಯದ್ ಅರ್ರಿಫಾಯೀ ಜೀಲಾನಿ ರಂಗಿನಕೆರೆ, ಕಾಪು ಖಾಝಿ ಅಹ್ಮದ್ ಮುಸ್ಲಿಯಾರ್, ಮುಫತ್ತಿಷ್ ಇಸ್ಮಾಯಿಲ್ ಮುಸ್ಲಿಯಾರ್, ಮುಫತ್ತಿಷ್ ಹಸನ್ ಸಖಾಫಿ, ಚಂದ್ರನಗರ ಮುಹಮ್ಮದ್ ಫಾರೂಕ್, ಹಾಜಿ ಉಮರಬ್ಬ ಉಪಸ್ಥಿತರಿದ್ದರು.
ಎಸ್‌ಜೆಎಂ ಉಡುಪಿ ಜಿಲ್ಲಾಧ್ಯಕ್ಷ ಅಬ್ದುರ‌್ರಝಾಕ್ ಖಾಸಿಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಖಾನ್ ಅಹ್ಸನೀ ಕುಂದಾಪುರ ವಂದಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಕೆ.ಅಬ್ದುರ‌್ರಶೀದ್ ಕಾಮಿಲ್ ಸಖಾಫಿ ಮಜೂರು ಕಾರ್ಯಕ್ರಮ ನಿರ್ವಹಿಸಿದರು.