ರಾಷ್ಟ್ರಮಟ್ಟದ ‘ಮಿನಿ-ಪಿಟಿಟಿಎಸ್’ ವಿದ್ಯಾರ್ಥಿ ತರಬೇತಿ ಕಾರ್ಯಕ್ರಮ

Update: 2023-08-30 12:25 GMT

ಉಡುಪಿ, ಆ.30: ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಹಾಗೂ ಪಿಝಿಕ್ಸ್ ಟ್ಯಾಲೆಂಟ್ ಆ್ಯಂಡ್ ಟ್ರೈನಿಂಗ್ ಸರ್ಚ್(ಪಿಟಿಟಿಎಸ್) ಸಂಸ್ಥೆ ಜಂಟಿ ಆಶ್ರಯದಲ್ಲಿ ಏಳು ದಿನಗಳ ರಾಷ್ಟ್ರಮಟ್ಟದ ಮಿನಿ-ಪಿಟಿಟಿಎಸ್ ಎಂಬ ವಿದ್ಯಾರ್ಥಿ ತರಬೇತಿ ಕಾರ್ಯಕ್ರಮವನ್ನು ಆ.21ರಿಂದ 27ರವರೆಗೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಪಿಟಿಟಿಎಸ್ ಸಂಯೋಜಕ, ಕೇಂದ್ರ ವಿಶ್ವವಿದ್ಯಾಲಯ ಹೈದರಬಾದ್ ಇದರ ಭೌತಶಾಸ್ತ್ರ ವಿಭಾಗದ ನಿವೃತ್ತ ಕ್ರೊನೋಲಿಜಿಕಲ್ ಪ್ರೊ.ಶಿವಕುಮಾರ್,ಪಿಪಿಸಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ.ಆಚಾರ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಈ ಕಾರ್ಯಕ್ರಮದ ಸ್ಥಳೀಯ ಸಂಯೋಜಕ ರಾಗಿದ್ದರು.

ಈ ತರಬೇತಿ ಕಾರ್ಯಾಗಾರದಲ್ಲಿ ದೆಹಲಿ, ಪಂಜಾಬ್, ಮಧ್ಯಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ತಮಿಳು ನಾಡು, ಕೇರಳ ಮತ್ತು ಕರ್ನಾಟಕ ಹೀಗೆ ದೇಶದ ವಿವಿಧ ರಾಜ್ಯಗಳ 38 ಬಿ.ಎಸ್ಸಿ. ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳಿಂದ 15 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಎಂಟು ಮಂದಿ ಪೂರ್ಣಪ್ರಜ್ಞ ಕಾಲೇಜಿನವರಾಗಿದ್ದಾರೆ.

ಈ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪ್ರವೇಶ ಪರೀಕ್ಷೆ ಹಾಗೂ ಸಮಾನತೆಯ ಮೇಲೆ ಆಧರಿಸಿದ್ದು ಇದರಲ್ಲಿ ಗ್ರಾಮೀಣ ಹಾಗೂ ನಗರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. 6 ದಿನಗಳ ಕಾಲ ಕಠಿಣ ತರಬೇತಿಯನ್ನು ನೀಡಿದ್ದು ಬೆಳಗ್ಗಿನ ಅವಧಿಯಲ್ಲಿ ತರಗತಿಗಳು ಮತ್ತು ಮಧ್ಯಾಹ್ನದ ಅವಧಿಯಲ್ಲಿ ಸಮಸ್ಯೆ ವಿಶ್ಲೇಷಣೆ ಹಾಗೂ ಪರಿಹರಿಸುವ ಕೌಶಲ್ಯ, ಪ್ರಾಯೋಗಿಕ ತರಗತಿಗಳು ಈ ರೀತಿ ತರಬೇತಿಯು ಅನೇಕ ಅವಧಿಗಳನ್ನ ಒಳಗೊಂಡಿತ್ತು.

ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ವಿಧಾನದ ಮೂಲಕ ತಂಡಗಳಲ್ಲಿ ಭಾಗವಹಿಸಿ ಕಲಿತುಕೊಳ್ಳಲು ಪ್ರೋತ್ಸಾಹ ನೀಡಲಾ ಯಿತು. ಅಂತೆಯೇ ಮುಖ್ಯ ಅವಧಿಗಳ ತರುವಾಯ ವಿಜ್ಞಾನ ಚಲನಚಿತ್ರ ವೀಕ್ಷಣೆ, ಆಕಾಶ ವೀಕ್ಷಣೆ ಭೌತಶಾಸ್ತ್ರದಲ್ಲಿ ವೃತ್ತಿ ಜೀವನ ಇಂತಹ ವಿಶೇಷ ಅವಧಿಗಳನ್ನು ಪ್ರತಿದಿನ ಆಯೋಜಿಸಲಾಗಿತ್ತು.

ಪ್ರೊ.ಶಿವಕುಮಾರ್ ಸೇರಿದಂತೆ ಐಐಎಸ್‌ಇಆರ್ ಕೊಲ್ಕತ್ತದ ಪ್ರೊ. ಆನಂದ ದಾಸ್ ಗುಪ್ತ ಮತ್ತು ಎನ್‌ಐಟಿಇಯ ಪ್ರೊ. ಸತ್ಯಜಿತ್ ಮುಖ್ಯ ಅವಧಿಗಳ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಪೂರ್ಣಪ್ರಜ್ಞ ಕಾಲೇಜು ಮತ್ತು ಪಿಟಿಟಿಸಿ ಹಳೆ ವಿದ್ಯಾರ್ಥಿ ದಿನೇಶ್ ಹೆಬ್ಬಾರ್ ಇತರ ತರಗತಿಗಳಲ್ಲಿ ಬೋಧಕರಾಗಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮಣ ಐತಾಳ್ ಮಾತನಾಡಿ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರವನ್ನು ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ವಿನಯ ಕುಮಾರ್, ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News