ನೇಜಾರು ಕೊಲೆ ಪ್ರಕರಣ; ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ನಿಯೋಗದಿಂದ ಕುಟುಂಬಕ್ಕೆ ಸಾಂತ್ವಾನ

Update: 2023-11-21 11:56 GMT

ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಕೊಲೆ ನಡೆದ ಮನೆಗೆ ಉಡುಪಿ ಕಥೊಲಿಕ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ ಪ್ರತಿನಿಧಿಗಳು ಮತ್ತು ಸಮನ್ವಯ ಸೌಹಾರ್ದ ಸಮಿತಿ ತೊಟ್ಟಂ ಇದರ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಘಟನೆಯ ಕುರಿತು ಧರ್ಮಾಧ್ಯಕ್ಷರು ಅತೀವ ಆಘಾತ ಮತ್ತು ನೋವನ್ನು ವ್ಯಕ್ತಪಡಿಸಿದ್ದು, ಇಂತಹ ಘಟನೆ ಬುದ್ಧಿವಂತರ ಜಿಲ್ಲೆಯಾದ ಉಡುಪಿಯಲ್ಲಿ ನಡೆದಿರುವುದು ಆಘಾತಕಾರಿ ಯಾಗಿದೆ. ನೂರ್ ಮೊಹ್ಮದ್ ಮತ್ತು ಅವರ ಪುತ್ರ ಹಾಗೂ ಇಡೀ ಕುಟುಂಬದ ನೋವಿನಲ್ಲಿ ಕ್ರೈಸ್ತ ಸಮುದಾಯ ಭಾಗಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿ ಕಾರಿ ವಂ.ಡೆನಿಸ್ ಡೇಸಾ, ತೊಟ್ಟಂ ಸಮನ್ವಯ ಸೌಹಾರ್ದ ಸಮಿತಿಯ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಸದಸ್ಯರಾದ ಸುನಿಲ್ ಫೆರ್ನಾಂಡಿಸ್, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ, ಪ್ರಸಾದ್, ಪ್ರಭಾಕರ್ ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಮೊದಲಾದವರು ಉಪಸ್ಥಿತರಿದ್ದರು.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News