ನೇಜಾರು ಹತ್ಯೆ ಪ್ರಕರಣ: ಇಂದು ಮೃತದೇಹಗಳ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ

Update: 2023-11-13 06:07 GMT

ದು:ಖತಪ್ತ ತಂದೆ, ಮಗ ಮತ್ತು ಕುಟುಂಬಸ್ಥರು

ಉಡುಪಿ, ನ.13: ನೇಜಾರು ತೃಪ್ತಿ ಲೇಔಟ್ ನಲ್ಲಿ ರವಿವಾರ ನಡೆದ ಹತ್ಯೆ ಪ್ರಕರಣದ ನಾಲ್ಕು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಮಣಿಪಾಲ ಕೆಎಂಸಿ ಶವಗಾರದಲ್ಲಿ ನೆರವೇರಿಸಲಾಯಿತು.

ಮರಣೋತ್ತರ ಪರೀಕ್ಷೆಯ ಬಳಿಕ ನಾಲ್ವರ ಪ್ರಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮನೆಯ ಯಜಮಾನ ನೂರ್ ಮುಹಮ್ಮದ್ ಸೌದಿ ಅರೇಬಿಯಾದಿಂದ ಇಂದು ಬೆಳಗ್ಗೆ 6ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಿದರು.

ಉಡುಪಿ ಜಾಮಿಯ ಮಸೀದಿಯಲ್ಲಿ ತಾಯಿ ಮತ್ತು ಹಿರಿಯ ಮಗಳ, ಇಂದ್ರಾಳಿ ಮಸೀದಿಯಲ್ಲಿ ಕಿರಿಯ ಮಗಳ ಹಾಗೂ ಉಡುಪಿ ಖಬರಸ್ತಾನದಲ್ಲಿರುವ ಕೋಣೆಯಲ್ಲಿ ಮಗನ ಪಾರ್ಥಿವ ಶರೀರಗಳ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ನಾಲ್ಕು ಪ್ರಾರ್ಥಿವ ಶರೀರಗಳನ್ನು ನೇಜಾರು ತೃಪ್ತಿ ಲೇಔಟ್ ನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು.

ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಮಧ್ಯಾಹ್ನ ಕೋಡಿಬೆಂಗ್ರೆ ಮಸೀದಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News