ಕುಡಿತದ ಚಟ: ಕುಸಿದು ಬಿದ್ದು ಬಾಲಕ ಮೃತ್ಯು

Update: 2024-07-03 16:45 GMT

ಹಿರಿಯಡ್ಕ, ಜು.3: ವಿಪರೀತ ಕುಡಿತ ಚಟ ಹೊಂದಿದ್ದ ಬಾಲಕನೋರ್ವ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜು.3ರಂದು ನಡೆದಿದೆ.

ಮೃತರನ್ನು ಅಂಜಾರು ಗ್ರಾಮದ ಪ್ರೇಮಾ ಎಂಬವರ ಮಗ ಪ್ರಜ್ವಲ್(17) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ವಿಪರೀತ ಮದ್ಯಪಾನ ಮಾಡುತ್ತಿದ್ದನು. ಮೂತ್ರ ಮಾಡಲು ಬಾತ್‌ರೂಂಗೆ ಹೋದಾಗ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News