ಕೊಂಕಣ್ ರೈಲ್ವೆ ವಿಲೀನ ಬಗ್ಗೆ ರಾಜ್ಯ ಸರಕಾರದಿಂದ ವರದಿ: ರೈಲ್ವೆ ಸಚಿವರ ಭರವಸೆ

Update: 2024-07-26 14:04 GMT

ಉಡುಪಿ : ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ದೆಹಲಿಯಲ್ಲಿ ಭೇಟಿ ಮಾಡಿ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಬೇಕು ಸಹಿತ ಹಲವು ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿದರು.

ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾದರೆ ಮಾತ್ರ ಹೀಗಿರುವ ರೈಲ್ವೇ ಹಳಿಗಳ ಮೇಲ್ದರ್ಜೆ ಮತ್ತು ಹೆಚ್ಚು ವರಿ ಬೋಗಿಗಳ ಜೋಡಣೆ ಹಾಗೂ ಹೀಗಿರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಸೇರಿಲು ಅವಕಾಶ ಮತ್ತು ಹೊಸ ರೈಲು ಬೇಡಿಕೆಗಳ ಬಗ್ಗೆ ವಿವರಿಸಿದರು.

ಈ ಎಲ್ಲಾ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿದ ಸಚಿವರು, ಕೊಂಕಣ್ ರೈಲ್ವೆ ವಿಲೀನದ ಬಗ್ಗೆ ಕೂಡಲೇ ರಾಜ್ಯ ಸರಕಾರ ದಿಂದ ವರದಿ ತರಿಸುವುದಾಗಿ ಭರವಸೆ ನೀಡಿದರು.

ಈಗಿನ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತು ಪಡಿಸಿ ತಡರಾತ್ರಿ ಉಡುಪಿ ಕುಂದಾಪುರ ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸ ಬೆಂಗಳೂರು ಕಾರ ವಾರ ನಡುವೆ ರೈಲಿಗೆ ಮನವಿ ಮಾಡಿದರು. ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ ಕೊಟ್ಟ ಮನವಿಗೆ ಸಚಿವರು ಒಪ್ಪಿಕೊಂಡರು.

ಮತ್ಸ್ಯಗಂಧಾ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐಸಿಎಪ್ ಮಾದರಿಯದಾಗಿದ್ದು ತಕ್ಷಣವೇ ಅದನ್ನು ಆಧುನಿಕ ಎಲ್‌ಎಚ್‌ಬಿ ಕೋಚಿಗೆ ಮೇಲ್ದರ್ಜೆಗೆ ಏರಿಸಲು ಕೋರಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News