ತೈಲ ಸೊರಿಕೆ: ರಸ್ತೆಯಲ್ಲಿ ಪಲ್ಟಿಯಾದ ಹಲವು ದ್ವಿಚಕ್ರ ವಾಹನಗಳು!

Update: 2024-10-07 15:34 GMT

ಉಡುಪಿ, ಅ.7: ವಾಹನವೊಂದರಿಂದ ತೈಲ ಸೊರಿಕೆಯಾದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಇಂದು ಸಂಜೆ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ.

ಅಪರಿಚಿತ ವಾಹನವೊಂದರಿಂದ ತೈಲವು ರಸ್ತೆಗೆ ಸೋರಿಕೆಯಾಗಿದ್ದು, ಇದರ ಮೇಲೆ ಚಲಿಸಿದ ನಾಲ್ಕೈದು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಪಲ್ಟಿಯಾಗಿ ಬಿತ್ತೆನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.

ಅದರಂತೆ ಮಲ್ಪೆ ಅಗ್ನಿಶಾಮಕ ದಳದ ಜಲ ವಾಹನವು ಸ್ಥಳಕ್ಕೆ ಬಂದು ರಸ್ತೆಗೆ ನೀರು ಬಿಟ್ಟು ಎಣ್ಣೆ ಅಂಶವನ್ನು ಶುಚಿಗೊಳಿಸ ಲಾಯಿತು. ಬಳಿಕ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News