ಉಡುಪಿ| "ಸ್ಥಳೀಯರಿಗೆ ತೊಂದರೆಯಾಗದಂತೆ ಹೋಮ್‌ಸ್ಟೇ, ರೆಸಾರ್ಟ್ ಕಾರ್ಯನಿರ್ವಹಿಸಲಿ"

Update: 2024-10-07 15:59 GMT

ಉಡುಪಿ: ಜಿಲ್ಲೆಯ ಕೆಲವು ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಷರತ್ತುಗಳನ್ನು ಪಾಲಿ ಸದೇ ಅನೈತಿಕ ಚಟುವಟಿಕೆಗಳನ್ನು ಹಾಗೂ ಸ್ಥಳೀಯರಿಗೆ ತೊಂದರೆಯಾಗುವಂತೆ ಕಾರ್ಯನಿರ್ವಹಿಸುತ್ತಿರುವ ಕುರಿತು ಸ್ಥಳಿಯರಿಂದ ದೂರುಗಳು ಕೇಳಿ ಬರುತ್ತಿವೆ.

ಇಲಾಖೆಯಿಂದ ಅನುಮೋದನೆ ಪಡೆದು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳು ಸ್ಥಳೀಯರಿಗೆ ತೊಂದರೆ ಯಾಗದಂತೆ ಇಲಾಖೆಯ ಷರತ್ತುಗಳನ್ವಯ ಕಾರ್ಯನಿರ್ವಹಿಸಬೇಕು. ಒಂದು ವೇಳೆ ನಿಯಮ ಗಳನ್ನು ಮೀರಿ ಕಾರ್ಯನಿರ್ವಹಿಸಿ, ಸ್ಥಳೀಯರಿಗೆ ತೊಂದರೆ ಉಂಟಾದಲ್ಲಿ ಸದರಿ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳ ಅನುಮೋದನೆಗಳನ್ನು ರದ್ದುಪಡಿಸಲಾಗುವುದು.

ಕೆಟಿಟಿಎಫ್ ಆ್ಯಕ್ಟ್-೨೦೧೫ರ ಪ್ರಕಾರ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಯನ್ನು ಪಡೆದ ನಂತರವೇ ಹೋಮ್‌ಸ್ಟೇ, ರೆಸಾರ್ಟ್ ಹಾಗೂ ಯಾವುದೇ ಇತರೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕು. ಆದರೆ ಕೆಲ ವೊಂದು ಹೋಮ್‌ಸ್ಟೇ, ರೆಸಾರ್ಟ್‌ಗಳು ಹಾಗೂ ಇತರೆ ಪ್ರವಾಸೋದ್ಯಮ ಚಟುವಟಿಕೆಗಳು ಪರವಾನಿಗೆಯನ್ನು ಪಡೆ ಯದೇ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿವೆ.

ಹೀಗೆ ಇಲಾಖೆಯ ಪರವಾನಿಗೆ ಇಲ್ಲದೇ ನಡೆಸುತ್ತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸಲಾಗುವುದು ಹಾಗೂ ಪರವಾನಿಗೆಯನ್ನು ಪಡೆದ ನಂತರ ಸದರಿ ಚಟುವಟಿಕೆಯನ್ನು ನಡೆಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News