ಉಡುಪಿ ದಸರಾ ಮಹೋತ್ಸವದ ವಿಸರ್ಜನಾ ಶೋಭಾಯಾತ್ರೆ

Update: 2024-10-13 12:15 GMT

ಉಡುಪಿ, ಅ.13: ಉಡುಪಿ ದಸರಾ ಸಾರ್ವಜನಿಕ ಶ್ರೀಶಾರದೊತ್ಸವ ಸಮಿತಿ ವತಿಯಿಂದ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 9ನೇ ವರ್ಷದ ಉಡುಪಿ ದಸರಾ ಮಹೋತ್ಸವದ ವಿಸರ್ಜನಾ ಶೋಭಾ ಯಾತ್ರೆಗೆ ಉಡುಪಿ ನಗರಸಭೆಅಧ್ಯಕ್ಷ ಪ್ರಭಾಕರ ಪೂಜಾರಿ ಶನಿವಾರ ಚಾಲನೆ ನೀಡಿದರು.

ಶಾರದೋತ್ಸವ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ರವೀಂದ್ರ ಶೆಟ್ಟಿ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಟಿ.ಜಿ.ಹೆಗಡೆ, ವೀಣಾ ಶೆಟ್ಟಿ, ಅಶೋಕ್ ಶೆಟ್ಟಿಗಾರ್, ಶಾರದಾ ಮೊಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಮಟ್ಟು, ಉಪಧ್ಯಕ್ಷ ರಾಧಾಕೃಷ್ಣ ಮೆಂಡನ್ ಮಲ್ಪೆ, ಸುರೇಶ್ ಶೇರಿಗಾರ್, ಪದ್ಮಾ ರತ್ನಾಕರ್, ತಾರಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಅರ್ಚಕ ದಾಮೋದರ್ ಭಟ್ ಕರಂಬಳ್ಳಿ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ವಿಸರ್ಜನಾ ಶೋಭಾಯಾತ್ರೆ ಮಂಗಳವಾದ್ಯ, ಚಂಡೆ, ಕುಣಿತಾ ಭಜನಾ ತಂಡಗಳು, ತಾಲೀಮ್ ಪ್ರದರ್ಶನ, ನಾಸಿಕ್ ಬ್ಯಾಂಡ್, ವೇದ ಘೋಷ, ಭಜನೆಯೊಂದಿಗೆ ಅಜ್ಜರಕಾಡು ಗೋವಿಂದ್ ಕಲ್ಯಾಣದಿಂದ ಹೊರಟು ಜೋಡುರಸ್ತೆ, ಹಳೆ ಡಯಾನಾ ಸರ್ಕಲ್, ಕೆಎಂ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಾಗಿಬಂದು ಶಂಕರ ನಾರಾಯಣ ದೇವಳದ ಪದ್ಮ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News