ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು

Update: 2024-10-13 13:52 GMT

ಗಂಗೊಳ್ಳಿ, ಅ.13: ಬೆಂಕಿ ಅಕಸ್ಮಿಕದಿಂದ ಗಾಯಗೊಂಡಿದ್ದ ಮಹಿಳೆ ಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕೂಡಪಾಡಿ ಗ್ರಾಮದ ಫಾತಿಮಾ ಕಾರ್ಡಿನ್ (65) ಎಂದು ಗುರುತಿಸಲಾಗಿದೆ. ಇವರು ಅ.2ರಂದು ಅಣ್ಣನ ಮನೆಯಾದ ಕೊಡಪಾಡಿ ಯಲ್ಲಿ ಗ್ಯಾಸ್ ಓಲೆಯಲ್ಲಿ ಚಹಾ ಮಾಡುತ್ತಿದ್ದು, ಆಗ ಬೆಂಕಿ ಅವರ ನೈಟಿಗೆ ತಾಗಿ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅ.13ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News