ವಿಜಯದಶಮಿ ಸಂಗೀತೋತ್ಸವ: ರಜತ ಸಂಭ್ರಮ ಸಮಾರಂಭ

Update: 2024-10-13 13:49 GMT

ಉಡುಪಿ, ಅ.13: ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಶನಿವಾರ ವಿಜಯದಶಮಿ ಸಂಗೀತೋತ್ಸವ, ಸಂಸ್ಥೆಯ ರಜತ ಸಂಭ್ರಮ ಸಮಾರಂಭ ಜರಗಿತು.

ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ’ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪಿಳ್ಳಾರಿ ಗೀತೆಗಳನ್ನು ಹಾಡಿದರು. ಅಭಿನವ್ ಭಟ್ ಹಾಗೂ ತನ್ವಿ ಶಾಸ್ತ್ರಿ ಅವರಿಂದ ಹಾಡುಗಾರಿಕೆ ನಡೆಯಿತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ಹಿರಿಯ ಸಾಹಿತಿ ಪ್ರೊ.ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ಮಂಜುನಾಥ ಉಪಾಧ್ಯ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಸುರೇಖಾ ಭಟ್ ಪಟ್ಲ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಉದಯ ಶಂಕರ ಭಟ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿರ್ದೇಶಕಿ, ಸಂಗೀತ ಗುರು ಉಮಾಶಂಕರಿ ವಂದಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಹೇಮಲತಾ ರಾವ್ ಉಡುಪಿ - ಸಂಗೀತ ಕಛೇರಿ ನಡೆಯಿತು. ವಯೋಲಿನ್ ಪ್ರಮಥ್ ಭಾಗವತ್, ಮೃದಂಗದಲ್ಲಿ ಶಾಶ್ವತ್ ಕೆ.ಭಟ್. ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News