ಅಬ್ದುಲ್ ಸಲಾಂ ಚಿತ್ತೂರುಗೆ ’ನಮ್ಮೂರ ಪೊನ್ನು’ ಗೌರವ
Update: 2025-01-07 13:39 GMT
ಕುಂದಾಪುರ, ಜ.7: ಕೋಟೇಶ್ವರದ ಮೂಡು ಗೋಪಾಡಿಯಲ್ಲಿರುವ ಐ.ಬಿ.ಟಿ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳು, ಶಿಕ್ಷಣ ಮತ್ತು ಸಾಮಾಜಿಕ ನಾಯಕತ್ವದಲ್ಲಿ ತೊಡಗಿಸಿಕೊಂಡಿರುವ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾದ ಅಬ್ದುಲ್ ಸಲಾಂ ಚಿತ್ತೂರು ಅವರಿಗೆ ‘ನಮ್ಮೂರ ಪೊನ್ನು’ ಬಿರುದು ನೀಡಿ ಗೌರವಿಸಲಾಯಿತು.
ಐ.ಬಿ.ಟಿ ಗಾರ್ಡನ್ ಚೆಯರ್‌ಮೆನ್ ಸೈಯದ್ ಜಅಫರ್ ಅಸ್ಸಖಾಫ್ ತಂಘಲ್, ಅಬ್ದುಲ್ ಸಲಾಂ ಚಿತ್ತೂರು ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಮೂಡುಗೋಪಾಡಿ ಜುಮ್ಮಾ ಮಸೀದಿಯ ಖತೀಬ ಇಖ್ರಾಮುಲ್ಲಾ ಸಖಾಫಿ, ಸೈಯದ್ ಶಾಮೀರ್ ಹುಸೈನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಅಮೀರ್ ಅಹ್ಸನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.