ಎಟಿಎಂ ನಿರ್ವಹಣೆ ಸ್ಥಗಿತ: ಮೆಸ್ಕಾಂ ಬಿಲ್ ಪಾವತಿಗೆ ಪರದಾಟ

Update: 2025-01-10 12:45 GMT

ಉಡುಪಿ: ಎ.ಟಿ.ಎಂ ನಿರ್ವಹಣೆ ಸ್ಥಗಿತಗೊಂಡಿರುವುದರಿಂದ ಉಡುಪಿ ಮೆಸ್ಕಾಂ ಕಛೇರಿಯಲ್ಲಿ ವಿದ್ಯುತ್ ಶುಲ್ಕ ಪಾವತಿಸಲು ಸಾರ್ವಜನಿಕರು ಪರದಾಡ ಬೇಕಾದ ಪರಿಸ್ಥಿತಿ ಎದುರಾಗಿದ್ದು, ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಶುಲ್ಕ ಪಾವತಿಸಲು, ಮಣಿಪಾಲ, ಕುಂಜಿಬೆಟ್ಟು, ಪರ್ಕಳ, ಹಿರಿಯಡ್ಕ, ಮೂಡುಬೆಳ್ಳೆ, ಉದ್ಯಾವರ, ಪುತ್ತೂರು ಹಾಗೂ ಉಡುಪಿ ನಗರ ಪರಿಸರದ ಸಾರ್ವಜನಿಕರು, ಮೆಸ್ಕಾಂ ಎ.ಟಿ.ಎಂ ಸ್ಥಗಿತದಿಂದಾಗಿ ಬಹಳ ತೊಂದರೆ ಅನುಭವಿಸ ಬೇಕಾಗಿದೆ. ಮೆಸ್ಕಾಂ ಸಿಬ್ಬಂದಿಗಳಲ್ಲಿ ಶುಲ್ಕ ಪಾವತಿಸುವ ಸಾರ್ವಜನಿಕ ರ ಸರತಿ ಸಾಲು ಬಹಳ ದೂರದವರೆಗೂ ಇರುತ್ತದೆ. ಗಂಟೆ ಗಟ್ಟಲೇ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶುಲ್ಕ ಪಾವತಿಸಲು ಕೆಲಸ ಕಾರ್ಯಗಳಿಗೆ ರಜೆ ಹಾಕಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರು ಸರತಿ ಸಾಲಲ್ಲಿ ನಿಂತು ಸುಸ್ತಾಗಿ ಅಸ್ವಸ್ಥರಾದ ಘಟನೆಗಳು ನಡೆದಿವೆ. ಆದಷ್ಟು ಬೇಗನೆ ಮೆಸ್ಕಾಂ ಅಧಿಕಾರಿಗಳು ಸ್ಥಗಿತವಾಗಿರುವ ಎ.ಟಿ.ಎಂ ಕಾರ್ಯನಿರ್ವಹಣೆಯನ್ನು ಮರು ಪ್ರಾರಂಭಿಸಬೇಕು ಎಂದು ಉಡುಪಿ ಜಿಲ್ಲಾ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News