ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ತಾಜುದ್ದೀನ್
ಬ್ರಹ್ಮಾವರ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿ ತಾಜುದ್ದೀನ್ ಇಬ್ರಾಹಿಮ್ ಬ್ರಹ್ಮಾವರ ಹಾಗೂ ಕಾರ್ಯದರ್ಶಿಯಾಗಿ ಇಬ್ರಾಹಿಮ್ ಆದಮ್ ಹುಸೇನ್ ಬಾರ್ಕೂರು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡ ಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಬಶೀರ್ ಕೋಟ, ಜೊತೆ ಕಾರ್ಯ ದರ್ಶಿಯಾಗಿ ಇಸ್ಮಾಯಿಲ್ ಬ್ಯಾರಿ ಕೋಟ ಪಡುಕರೆ, ಕೋಶಾಧಿಕಾರಿಯಾಗಿ ಝಹೀರ್ ಮುಹಮ್ಮದ್ ಅಲಿ ಸಾಸ್ತಾನ ಆಯ್ಕೆಯಾಗಿದ್ದಾರೆ.
ತಾಲೂಕು ಸಮಿತಿಗೆ ನಡೆದ ಚುನಾವಣೆಯಲ್ಲಿ ತಾಲೂಕು ಸಮಿತಿ ಸದಸ್ಯರಾಗಿ ಮುಹಮ್ಮದ್ ಆಸಿಫ್ ಬೈಕಾಡಿ, ಆಮೀರ್ ಬಾಷಾ ಬಾರ್ಕೂರು, ಅಲ್ತಾಫ್ ಮಟಪಾಡಿ, ಹಾರೂನ್ ರಶೀದ್ ಸಾಸ್ತಾನ, ಜಮಾಲುದ್ದೀನ್ ಬ್ರಹ್ಮಾವರ, ಕೆ. ಬಶೀರ್ ಕೋಟ, ಫಾರೂಕ್ ಬಾರ್ಕೂರು, ಇಬ್ರಾಹಿಮ್ ಸಾಹೇಬ್ ಕೋಟ, ಅಸ್ಲಮ್ ಹೈಕಾಡಿ ಮತ್ತು ಜಾಫರ್ ಸಾದಿಕ್ ಹೊನ್ನಾಳ ಆಯ್ಕೆಯಾಗಿದ್ದಾರೆ.
ಜಮಾಲ್ ಹೈದರ್ ಬ್ರಹ್ಮಾವರ, ಹನೀಫ್ ಹೊನ್ನಾಳ, ಮುಬಾರಕ್ ಬಾರ್ಕೂರು, ನಝೀರ್ ಅಹ್ಮದ್ ಸಾಸ್ತಾನ ಮತ್ತು ಅಬ್ದುಸ್ಸಲಾಮ್ ಬ್ರಹ್ಮಾವರ ಅವರನ್ನು ತಾಲೂಕು ಸಮಿತಿ ಸದಸ್ಯರಾಗಿ ಸಹಕರಣ ಮಾಡಿಕೊಳ್ಳಲಾಯಿತು.