ಶಿರ್ವ ಬಾಲಕೃಷ್ಣ ಪ್ರಭು
Update: 2025-01-10 12:50 GMT
ಶಿರ್ವ: ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದ ಶಿರ್ವ ಬಾಲಕೃಷ್ಣ ಪ್ರಭು (61) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಇವರು ಶಿರ್ವ ಗೌಡ ಸಾರಸ್ವತ ಸಮಾಜದ ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖರಾಗಿದ್ದು, ಶಿರ್ವ ಶ್ರೀಮಹಾಲಸಾ ನಾರಾಯಣ ಭಜನಾ ಮಂಡಳಿಯಲ್ಲಿ ಭಜನಾ ಗಾಯಕರಾಗಿ ಸೇವೆ ನೀಡುತ್ತಿದ್ದರು.
ಅವಿವಾಹಿತರಾದ ಇವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಶಿರ್ವದಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ದಿವಂಗತ ಸದಾನಂದ ಪ್ರಭುರವರ ಪುತ್ರ.