ವರ್ತಮಾನದ ಗೊಂದಲಗಳಿಗೆ ನಾರಾಯಣಗುರು ಚಿಂತನೆಯೇ ಪರಿಹಾರ: ದಯಾನಂದ ಕರ್ಕೇರ

Update: 2025-01-14 12:55 GMT

ಉಡುಪಿ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಯ ವಿರುದ್ದ ಸಂಘರ್ಷರಹಿತವಾದ ಸುಧಾರಣಾ ಕ್ರಾಂತಿಯನ್ನು ರೂಪಿಸಿ ಆ ಮೂಲಕ ಯಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಪ್ರತಿಯೊಂದು ಅನು ಷ್ಠಾನ ಹಾಗೂ ಚಿಂತನೆಗಳು ಬೆಂಕಿಯಾಗಿ ಕಾಡುತ್ತಿರುವ ವರ್ತಮಾನದ ಗೊಂದಲಗಳಿಗೆ ಸೂಕ್ತ ಪರಿಹಾರವಾಗಬಲ್ಲ ಬೆಳಕಿನ ಮೌಲ್ಯವನ್ನು ಹೊಂದಿದೆ ಎಂದು ಉಪನ್ಯಾಸಕ ದಯಾನಂದ ಕರ್ಕೇರ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ರವಿವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜರಗಿದ ಸೇವಾ ಸೌರಭ ಸಂಭ್ರಮದಲ್ಲಿ ಅವರು ಗುರು ಸಂದೇಶವನ್ನು ನೀಡಿದರು.

ಗುರುಗಳು ಮಾನವೀಯ ಪ್ರಜ್ಞೆಯಿಂದ ಚಳುವಳಿಯನ್ನು ರೂಪಿಸಿ ಭವ್ಯ ಭವಿಷ್ಯಕ್ಕೆ ದಾರಿ ತೋರಿಸಿದ್ದಾರೆ. ಅಂತಹದ್ದೆ ದಿಟ್ಟತನದ ನಿಲುವಿನಲ್ಲಿ ಜಾತ್ಯಾತೀತವಾಗಿ ಸತ್ಕಾರ್ಯಗಳನ್ನು ನಡೆಸುತ್ತಾ ಸರ್ವರ ಹಿತಾಸಕ್ತಿಯ ಪ್ರತೀಕವಾದ ಹಳದಿ ಧ್ವಜದೊಂದಿಗೆ ಗುರುಕಟ್ಟೆಯನ್ನು ಸೌಹಾರ್ದ, ಸಾಮರಸ್ಯ, ಸಮೃದ್ಧಿಯ ಆಶಯದೊಂದಿಗೆ ಸ್ಥಾಪಿಸಿದ ಕರಾವಳಿಯ ಏಕೈಕ ಸಂಘಟನೆಯಾದ ನಾರಾಯಣ ಗುರು ಯುವ ವೇದಿಕೆಯ ಸೇವಾ ವೈಖರಿ ಗುರು ಬಯಸು ವಂತದ್ದು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಮಿಥುನ್ ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ಹರೀಶ್ ಪೂಜಾರಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು.

ಶಬರೀಶ್ ಸುವರ್ಣ ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News