ರಾಜ್ಯಕ್ಕೆ ನಾಲ್ಕನೆ ಸ್ಥಾನ ಪಡೆದ ಆಸ್ತಿ ಶೆಟ್ಟಿಗೆ ವೈದ್ಯಕೀಯ ಶಿಕ್ಷಣ ಮಾಡುವ ಗುರಿ

ಕಾರ್ಕಳ, ಎ.8: ಕಾರ್ಕಳ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಸ್ತಿ ಎಸ್.ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
ಮೂಲತ: ಕುಂದಾಪುರ ತಾಲೂಕಿನ ತೊಂಬತ್ತು ಗ್ರಾಮದ ಇವರ, ತಂದೆ ಸತೀಶ್ ಶೆಟ್ಟಿ ಉದ್ಯಮಿ ಯಾಗಿದ್ದು, ತಾಯಿ ಅನುಪಮಾ ಶೆಟ್ಟಿ ಗೃಹಿಣಿ ಯಾಗಿದ್ದಾರೆ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂಬುದಾಗಿ ನಂಬಿದ್ದ ನಾನು, ತುಂಬಾ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದೇನೆ. ತರಗತಿಗಳ ನಂತರ ಕಾಲೇಜಿನಲ್ಲಿ ರಚನಾತ್ಮಕ ಅಧ್ಯಯನ ಮಾದರಿ ಕೂಡ ನನಗೆ ಬಹಳಷ್ಟು ಸಹಾಯ ಮಾಡಿತು ಎಂದು ಆಸ್ತಿ ಶೆಟ್ಟಿ ತಿಳಿಸಿದ್ದಾರೆ.
ಮುಂದೆ ವೈದ್ಯಕೀಯ ಶಿಕ್ಷಣ ಮಾಡುವ ಗುರಿಯೊಂದಿಗೆ ನೀಟ್‌ಗೆ ತಯಾರಿ ನಡೆಸುತ್ತಿದ್ದೇನೆ. ಮನೆಯಲ್ಲಿ ಅಧ್ಯಯನ ಮಾಡುವುದು ಮತ್ತು ಕಾಲೇಜಿನಲ್ಲಿ ತೀವ್ರವಾದ ತರಬೇತಿ ನೀಡುತ್ತಿದ್ದುದರಿಂದ ಟೂಷನ್ ಅಥವಾ ಇತರ ಹೆಚ್ಚುವರಿ ಟ್ಯುಟೋರಿಯಲ್‌ಗಳ ಅಗತ್ಯ ನನಗೆ ಇರಲಿಲ್ಲ ಎಂದು ಅವರು ಹೇಳಿದರು.