ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗೆ ಪಿಯು ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ರ‍್ಯಾಂಕ್

Update: 2025-04-08 21:29 IST
ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗೆ ಪಿಯು ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ರ‍್ಯಾಂಕ್
  • whatsapp icon

ಕಾರ್ಕಳ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾಪದವಿ ಪೂರ್ವಕಾಲೇಜಿನ 13 ವಿದ್ಯಾರ್ಥಿಗಳು 10ರೊಳಗಿನ ರ್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದವಿಜ್ಞಾನ ವಿಭಾಗದ ಆಸ್ತಿ ಎಸ್596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾಆರ್ ನಾಯಕ್, ವಿಶ್ವಾಸ್‌ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಅಪೂರ್ವ್ ವಿ ಕುಮಾರ್595 ಅಂಕಗಳೊಂದಿಗೆರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ.

ಕಾರ್ಕಳ ಜ್ಞಾನಸುಧಾದ ಮಯೂರ್‌ಗೌಡ, ಭಾರ್ಗವ್‌ಎಚ್ ನಾಯಕ್, ವಿಷ್ಣು ಜಿ ನಾಯಕ್ ಹಾಗೂ ಶ್ರಾವ್ಯ ವಾಗ್ಲೆ594 ಅಂಕಗಳನ್ನು, ಹರ್ಷಿತ್‌ಆರ್‌ಎಚ್, ಅನ್ವಿತಾ ನಾಯಕ್, ವಿಶ್ವಆರ್ ನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹ ಎ ಕಾಮತ್593 ಅಂಕವನ್ನು, ಕಾರ್ಕಳ ಜ್ಞಾನಸುಧಾ ಉತ್ಸವ್ ಸಿ ಪಾಟೀಲ್, ಸಂಜನಾ ಶೆಣೈ ಮತ್ತುಉಡುಪಿ ಜ್ಞಾನಸುಧಾದ ರಚಿತ್‌ಜೆ.ಬಿ ಹಾಗೂ ಸೃಷ್ಟಿ592ಅಂಕವನ್ನು, ಕಾರ್ಕಳ ಜ್ಞಾನಸುಧಾದ ಸರ್ವಜಿತ್‌ಕೆ.ಆರ್, ಧನ್ಯಶ್ರೀ ಆರ್591 ಕಾರ್ಕಳ ಜ್ಞಾನಸುಧಾದ ಅನುಷ್ಕಾ ಜಿ, ಪ್ರಣವ್‌ ಎನ್.ಎಂ, ಶ್ರೇಯಸ್ ಕೆ, ಅನ್ವಿತಾಆರ್‌ಕಾಮತ್, ಸುಕೃತಿ ಜಿ. ಝೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ590ಅಂಕವನ್ನುಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಳಾದ ಸಹನಾ ನಾಯಕ್ ಹಾಗೂ ತನ್ವಿರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 591 ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5 ನೇ ಸ್ಥಾನಿಯಾಗಿ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕಿ (589 ಅಂಕ) ಸಚಿನ್ ಸುರೇಶ್ ಶೆಣೈ(589 ಅಂಕ) ಹಾಗೂ ಖತಿಜಾತುಲ್‌ರಫಿಯಾ(588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಆಧಿಕ ಪರ್ಸಂಟೇಜ್ ಗಳಿಸಿದ್ದಾರೆ. ವಿಷಯವಾರ ಪೂರ್ಣಾಂಕದಲ್ಲಿ ಗಣಿತಶಾಸ್ತ್ರ-144, ಜೀವಶಾಸ್ತ್ರದಲ್ಲಿ 113, ರಸಾಯನಶಾಸ್ತ್ರ-48, ಭೌತಶಾಸ್ತ್ರ-27, ಸಂಖ್ಯಾಶಾಸ್ತ್ರ-20, ಗಣಕಶಾಸ್ತ್ರ-37,ಮೂಲಗಣಿತ-2, ಲೆಕ್ಕಶಾಸ್ತ್ರ-7, ವ್ಯವಹಾರ ಅಧ್ಯಯನದಲ್ಲಿ21, ಮತ್ತು ಕನ್ನಡ-4 ಸೇರಿದಂತೆ 536 ವಿಷಯವಾರು ಪೂರ್ಣಂಕ ಬಂದಿರುತ್ತದೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News