ಶಿಥಿಲಾವಸ್ಥೆಯಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ತೆರವು
Update: 2025-04-08 21:36 IST

ಮಣಿಪಾಲ, ಎ.8: ಮಣಿಪಾಲ ಕೆನರಾ ಬ್ಯಾಂಕ್ ರಸ್ತೆಯ ಸಿಂಡಿಕೇಟ್ ಹೌಸ್ ಬಳಿ ನಗರಸಭೆಯ ಮಣಿಪಾಲ ಉಪ ಕಛೇರಿಯ ಎದುರು ಶಿಥಿಲಾವಸ್ಥೆ ಯಲ್ಲಿದ್ದ ಸುಮಾರು 50 ವರ್ಷಗಳ ಹಳೆಯ ನೀರಿನ ಟ್ಯಾಂಕ್‌ನ್ನು ಇಂದು ಧರೆಶಾಹಿ ಮಾಡುವ ಮೂಲಕ ತೆರವುಗೊಳಿಸಲಾಯಿತು.
ಸುಮಾರು 50 ವರ್ಷಗಳಿಂದ ಮಣಿಪಾಲ ಪರಿಸರಕ್ಕೆ ನೀರುಣಿಸುತ್ತಿದ್ದ ಉಡುಪಿ ನಗರಸಭೆಯ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಇದೀಗ ಶಿಥಿಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಧರೆಗೆ ಉರುಳಿಸಲಾಯಿತು. ಇದಕ್ಕಾಗಿ 3 ಕ್ರೇನ್‌ಗಳನ್ನು ಬಳಕೆ ಮಾಡಲಾಯಿತು. ಈ ಕಾರ್ಯಾಚರಣೆಯ ವೇಳೆ ಸುತ್ತಲಿನ ಎಲ್ಲ ರಸ್ತೆಗಳನ್ನು ಬಂದ್ ಮಾಡ ಲಾಗಿತ್ತು.
ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಲವು ಈ ರೀತಿ ನೀರಿನ ಟ್ಯಾಂಕ್ ಗಳನ್ನು ನಗರಸಭೆಯಿಂದ ಈಗಾಗಲೇ ತೆರವುಗೊಳಿಸಲಾಗಿದ್ದು, ಇನ್ನೂ ಬಾಕಿ ಇರುವ ಟ್ಯಾಂಕ್‌ಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.