ಉಡುಪಿ ಪೂರ್ಣಪ್ರಜ್ಞ ಪಿಯು ಕಾಲೇಜು: ಐವರು ಟಾಪರ್
Update: 2025-04-08 21:41 IST

ಉಡುಪಿ, ಎ.8: ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಒಂಭತ್ತನೇ ಸ್ಥಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಎಂಟನೇ ಸ್ಥಾನಗ ಳೊಂದಿಗೆ ಒಟ್ಟು ಐವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಚೆಸ್ಟನ್ ಆಂಟನಿ ಡಯಾಸ್ 591 ಅಂಕಗಳನ್ನು ಗಳಿಸುವ ಮೂಲಕ ಒಂಭತ್ತನೇ ಸ್ಥಾನದಲ್ಲಿದ್ದರೆ, ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ (592) ಎಂಟನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಅನ್ನ ರವೀಶ್ ಶೆಟ್ಟಿ (590), ರಿತೇಶ್ ಶೆಟ್ಟಿ (590) ಹಾಗೂ ಅಶ್ವಿಭ (590) ಹತ್ತನೇ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
ಕಾಲೇಜಿನಿಂದ ಒಟ್ಟು 592 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ. 98.82 ಮಂದಿ ತೇರ್ಗಡೆಗೊಂ ಡಿದ್ದಾರೆ. ಇವರಲ್ಲಿ 283 ಮಂದಿ ವಿಶಿಷ್ಟ ಶ್ರೇಣಿ ಹಾಗೂ 284 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ ಎಂದೂ ಪ್ರಾಂಶುಪಾಲರು ತಿಳಿಸಿದ್ದಾರೆ.