ಕು.ಗೋ. ಸಮಗ್ರ ಸಾಹಿತ್ಯ ಪುಸ್ತಕಗಳ ಲೋಕಾರ್ಪಣೆ

Update: 2025-04-13 21:33 IST
ಕು.ಗೋ. ಸಮಗ್ರ ಸಾಹಿತ್ಯ ಪುಸ್ತಕಗಳ ಲೋಕಾರ್ಪಣೆ
  • whatsapp icon

ಉಡುಪಿ, ಎ.13: ಹಿರಿಯ ಸಾಹಿತಿ ಗೋಪಾಲ ಭಟ್(ಕು.ಗೋ.) ಅವರ ಸಮಗ್ರ ಸಾಹಿತ್ಯ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಅವರ ಇಂದ್ರಾಳಿಯ ವಾಗ್ದೇವಿ ನಿವಾಸದಲ್ಲಿ ರವಿವಾರ ಜರಗಿತು.

ಸಂತೃಪ್ತ ಹೆರ್ಗ, ಪ್ರತೀಕ್ಷಾ ಬಿ., ವಿಘ್ನೇಶ್ ಭಟ್ ಪುಸ್ತಕವನ್ನು ಅನಾವರಣ ಗೊಳಿಸಿದರು. ಸಾಹಿತಿ ವಿ.ಗಣೇಶ್ ಮಾತನಾಡಿ, ಓದುಗರು ಪುಸ್ತಕಗಳನ್ನು ಓದಿದರಷ್ಟೇ ಲೇಖಕ ಸಂತೋಷವಾಗಿರಲು ಸಾಧ್ಯ. ಇದುವೇ ಓದುಗರು ಲೇಖಕನಿಗೆ ನೀಡುವ ಕೊಡುಗೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅವರನ್ನು ಓದುವಂತೆ ಹುರಿದುಂಬಿಸಬೇಕು ಎಂದರು.

ಸಾಹಿತಿ ಡಾ.ಪಾದೇಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕು.ಗೋ., ಪುಸ್ತಕ ಪ್ರಕಾಶಕರಾದ ವಿ.ಎಸ್.ನಾಗಮಣಿ, ಸಾಹಿತಿ ಅಂಬ್ರಯ್ಯ ಮಠ ಉಪಸ್ಥಿತರಿದ್ದರು. ಉಡುಪಿ ತಾಲೂಕ ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ.ಸ್ವಾಗತಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀನಿವಾಸ ಉಪಾಧ್ಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News