ಹೊಟೇಲ್ ಮಾಲಕ ನಾಪತ್ತೆ

Update: 2025-04-13 21:41 IST
ಹೊಟೇಲ್ ಮಾಲಕ ನಾಪತ್ತೆ
  • whatsapp icon

ಉಡುಪಿ, ಎ.13: ನಗರದ ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ, ಉಡುಪಿ ಹರಿಶ್ಚಂದ್ರ ಮಾರ್ಗ ನಿವಾಸಿ ಅಜಿತ್ ಕುಮಾರ್(48) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಇವರು ಎ.12ರಂದು ಸಂಜೆ ಹೊಟೇಲಿನ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಸ್ಕೂಟರ್‌ನಲ್ಲಿ ಹೋದವರು ಹೋಟೆಲ್‌ಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News