ಬಾವಿಗೆ ಬಿದ್ದು ಯುವಕ ಮೃತ್ಯು
Update: 2025-04-13 21:55 IST

ಕೋಟ, ಎ.13: ಆಯತಪ್ಪಿ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಯಡಾಡಿ ಮತ್ಯಾಡಿ ಎಂಬಲ್ಲಿ ಎ.12ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಶ್ರೀನಿವಾಸ ಎಂಬವರ ಮಗ ಗಣೇಶ(29) ಎಂದು ಗುರುತಿಸಲಾಗಿದೆ. ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಸುಮಾರು 15 ದಿನದ ಹಿಂದೆ ಕಾರ್ಯಕ್ರಮದ ನಿಮಿತ್ತ ಊರಿಗೆ ಬಂದಿದ್ದರು.
ಇವರು ಮನೆಯ ಎದುರು ಇರುವ ಬಾವಿಗೆ ನೀರು ತರಲು ಹೋದಾಗ ಆಯತಪ್ಪಿಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.