ಅಕ್ರಮ ಗಣಿಗಾರಿಕೆ ಆರೋಪ: ಹಲವು ಕಡೆ ಪೊಲೀಸರಿಂದ ದಾಳಿ

Update: 2025-04-13 22:08 IST
ಅಕ್ರಮ ಗಣಿಗಾರಿಕೆ ಆರೋಪ: ಹಲವು ಕಡೆ ಪೊಲೀಸರಿಂದ ದಾಳಿ

ಸಾಂದರ್ಭಿಕ ಚಿತ್ರ

  • whatsapp icon

ಕಾರ್ಕಳ, ಎ.13: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಹಲವು ಮಂದಿ ಹಾಗೂ ವಾಹನ ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಕ್ಕುಂದೂರು ಗ್ರಾಮದ ನಕ್ರೆ ಅಡ್ದಾಲು ವರ್ಣಬೆಟ್ಟು ಎಂಬಲ್ಲಿರುವ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ದಾಳಿ ನಡೆಸಿದ ಪೊಲೀಸರು, ಗಣಿಗಾರಿಕೆ ನಡೆಸುತ್ತಿದ್ದ ಕುಮಾರ್ ಮತ್ತು ಟೆಂಪೋ ಚಾಲಕ ಗಣೇಶ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ಇತರ ಆರೋಪಿಗಳಾದ ಕ್ರೇನ್ ಮಾಲಕ ತುಳಸಿಮಣಿ, ಟೇಂಪೋ ಮಾಲಕ ಮಂಜೇಶ್, ಸೈಜ್ ಕಲ್ಲು ಒಡೆಯಲು ಜನ ಕಳುಹಿಸಿರುವ ಗಣೇಶ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಕ್ರೇನ್, 407-ಟೆಂಫೋ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಕೋರೆಗೆ ದಾಳಿ ನಡೆ ಸಿದ ಪೊಲೀಸರು ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಓಡಿ ಪರಾರಿ ಯಾಗಿದ್ದಾರೆ. ಸುರೇಂದ್ರ ಎಂಬಾತನು ಕೆಲಸಗಾರರನ್ನು ಇಟ್ಟುಕೊಂಡು ಈ ಅಕ್ರಮ ಗಣಿಕಾರಿಕೆ ನಡೆಸುತ್ತಿರುವುದಾಗಿ ದೂರಲಾಗಿದೆ.

ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ದಾಳಿ ನಡೆಸಿದ್ದಾರೆ. ರಮೇಶ್ ಎಂಬಾತನು ಯಾವುದೇ ಪರವಾನಿಗೆಯನ್ನು ಹೊಂದದೆ ಈ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವು ದಾಗಿ ದೂರಲಾಗಿದೆ.

ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ, ಶಂಕರಬೆಟ್ಟು ಎಂಬಲ್ಲಿ ಸರಕಾರಿ ಪಾದೆಯಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದು ಈ ಸಂಬಂಧ ತಿಮ್ಮರಾಯ, ಬಾಬು, ಸುರೇಶ ಮತ್ತು ಮಣಿಕಂಠ ಎಂಬವರನ್ನು ಹಾಗೂ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಲ್ಲು ತೆಗೆಯಲು ಉಪಯೋಗಿಸಿದ ಸೊತ್ತು ಹಾಗೂ ಟಿಪ್ಪರ್ ಮತ್ತು 407 ಗೂಡ್ಸ್ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳ ಲಾಗಿದೆ. ಆರೋಪಿಗಳಾದ ಪ್ರಕಾಶ, ಸತೀಶ್, ಮಹಮ್ಮದ್ ರಫೀಕ್ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News