ಉಡುಪಿ: ಎಸ್ಪಿಯಿಂದ ಜೈ ಭೀಮ್ ರ‍್ಯಾಲಿಗೆ ಚಾಲನೆ

Update: 2025-04-14 20:22 IST
ಉಡುಪಿ: ಎಸ್ಪಿಯಿಂದ ಜೈ ಭೀಮ್ ರ‍್ಯಾಲಿಗೆ ಚಾಲನೆ
  • whatsapp icon

ಉಡುಪಿ, ಎ.14: ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ‘ಬಹುತ್ವದ ಉಳಿವಿಗಾಗಿ ಭೀಮ ಭಾರತದ ಸಂಕಲ್ಪ ...’ ಜೈ ಭೀಮ್ ರ‍್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂಭಾಗದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಯನ್ ಮಲ್ಪೆ, ಪರಮೇಶ್ವರ್ ಉಪ್ಪೂರು, ವಾಸುದೇವ್ ಮದ್ದೂರು, ವಾಸಂತಿ ಶಿವಾನಂದ, ನಾರಾಯಣ ಪರ್ಕಳ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಪರ್ಕಳದಲ್ಲಿ ಸ್ವಾಗತ: ಮಣಿಪಾಲದಿಂದ ಹೊರಟ ಜೈ ಭೀಮ್ ರ್ಯಾಲಿಯು ಪರ್ಕಳಕ್ಕೆ ಆಗಮಿಸಿದಾಗ ಪರ್ಕಳ ಪೇಟೆಯಲ್ಲಿ ಅದಕ್ಕೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಪರ್ಕಳದಲ್ಲಿ ಉದ್ಯಮಿ ಮೋಹನ್‌ ದಾಸ್ ನಾಯಕ್ ಚಂಡೆ ವಾದ್ಯ ಪಟಾಕಿಯ ಅಬ್ಬರದೊಂದಿಗೆ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಹಾರ ಹಾಕಿ ಸ್ವಾಗತಿಸಿ ವಾಹನ ಜಾಥವನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಜಗದೀಶ್ ಭೋವಿ, ನಾರಾಯಣ ಪರ್ಕಳ. ಶಿವಕುಮಾರ್ ಪರ್ಕಳ, ಅಶೋಕ್‌ಕುಮಾರ್ ಪರ್ಕಳ, ಪರಮೇಶ್ವರ್ ಉಪ್ಪೂರು, ಕಮಲಾಕ್ಷ ಚೇರ್ಕಾಡಿ, ಜಿಲ್ಲಾ ಸಂಘಟನಾ ಸಂಚಾಲಕರಾದ ವಾಸುದೇವ ಮುದೂರು, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು, ಆಪದ್ಬಾಂಧವ ಅಬ್ದುಲ್ ರೆಹಮಾನ್ ಸರಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. 



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News