ಕಾರು ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು
Update: 2025-04-14 22:28 IST

ಕೋಟ, ಎ.14: ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೋಟ ಮಣೂರು ರಾಜಲಕ್ಷ್ಮೀ ಸಭಾಭವನದ ಎದುರು ರಾ.ಹೆದ್ದಾರಿ 66ರಲ್ಲಿ ನಿನ್ನೆ ಸಂಜೆ ಸಂಭವಿಸಿದೆ.
ಮೃತ ಮಹಿಳೆಯನ್ನು ಗಿಳಿಯಾರಿನ ಗಿರಿಜಾ ಪೂಜಾರ್ತಿ (54) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಾದ ಹೊನ್ನಾರಿಯಿಂದ ಮಣೂರಿನಲ್ಲಿರುವ ತಾಯಿ ಮನೆಗೆ ಹೋಗಲು ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತಿದ್ದಾಗ ಗಿರಿಜಾ ಅವರಿಗೆ ಬನ್ನಾಡಿಯಿಂದ ಕುಂದಾಪುರದತ್ತ ವೇಗವಾಗಿ ಹೋಗುತಿದ್ದ ಕಾರು ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.