‘ಒನ್ ಸ್ಟೇಟ್ ಒನ್ ಜಿ.ಪಿ.ಎಸ್. ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ’

Update: 2023-09-22 14:51 GMT

ಉಡುಪಿ, ಸೆ.22: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಉಪಖನಿಜ ಮತ್ತು ಮುಖ್ಯ ಖನಿಜಗಳ ಸಾಗಾಣಿಕೆಯನ್ನು ತಡೆಗಟ್ಟುವ ಸಲುವಾಗಿ ಸರಕಾರ ಒನ್ ಸ್ಟೇಟ್ ಒನ್ ಜಿ.ಪಿ.ಎಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಉಪಖನಿಜ ಮತ್ತು ಮುಖ್ಯ ಖನಿಜಗಳ ಸಾಗಾಣಿಕೆ ಮಾಡುವ ಎಲ್ಲಾ ವಾಹನಗಳು, ಲಾರಿ ಹಾಗೂ ಟಿಪ್ಪರ್‌ಗಳು ಜಿ.ಪಿ.ಎಸ್ ಅಳವಡಿಸಿ ಕೊಂಡು ಒನ್ ಸ್ಟೇಟ್ ಒನ್ ಜಿ.ಪಿ.ಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ನೋಂದಣಿ ಕುರಿತು ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 0820-2001103, 080-22341135 ಹಾಗೂ ಹಿರಿಯ ಭೂವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333ನ್ನು ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News