ಮುಂಬೈಯಲ್ಲಿ ಪ್ಲಾಟ್‌ಫಾರಂ ವಿಸ್ತರಣಾ ಕಾಮಗಾರಿ: ಮಂಗಳೂರು ಜಂಕ್ಷನ್ - ಮುಂಬೈ ರೈಲು ಥಾಣೆವರೆಗೆ

Update: 2024-09-03 13:50 GMT

ಉಡುಪಿ, ಸೆ.3: ಮುಂಬೈಯ ಸಿಎಸ್‌ಎಂಟಿ ರೈಲ್ವೇ ನಿಲ್ದಾಣದಲ್ಲಿ ಫ್ಲಾಟ್‌ಫಾರಂ ನಂ.10,11,12,13ರ ವಿಸ್ತರಣಾ ಕಾಮಗಾರಿ ಸೆ.30ರವೆಗೆ ನಡೆಯಲಿರುವುದರಿಂದ ಹಲವು ದೂರ ಸಂಚಾರದ ರೈಲುಗಳ ಪ್ರಯಾಣ ವನ್ನು ಥಾಣೆ ಹಾಗೂ ದಾದರ್ ನಿಲ್ದಾಣಗಳಲ್ಲಿ ನಿಲ್ಲಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅದರಂತೆ ರೈಲು ನಂ.12134 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸೆ.30ರವರೆಗೆ ಥಾಣೆ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಡಗಾಂವ್-ವೆಲಂಕಣಿ ರೈಲು: ಸೆಪ್ಟಂಬರ್ ತಿಂಗಳಲ್ಲಿ ನಡೆಯುವ ವೆಲಂಕಣಿ ವಾರ್ಷಿಕ ಹಬ್ಬದ ಪ್ರಯುಕ್ತ ಮಡಗಾಂವ್ ಹಾಗೂ ವೆಲಂಕಣಿ ನಡುವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.

ರೈಲು ನಂ.01007 ಮಡಗಾಂವ್ ಜಂಕ್ಷನ್ ವೆಲಂಕಣಿ ವಿಶೇಷ ರೈಲು ಸೆ.6ರಂದು ಅಪರಾಹ್ನ 12:30ಕ್ಕೆ ಮಡಂಗಾವ್‌ ನಿಂದ ಹೊರಡಲಿದ್ದು, ಮರುದಿನ ಅಪರಾಹ್ನ 12:25ಕ್ಕೆ ವೆಲಂಕಣಿ ತಲುಪಲಿದೆ. ಅದೇ ರೀತಿ ರೈಲು ನಂ.01008 ವೆಲಂಕಣಿ-ಮಡಗಾಂವ್ ಜಂಕ್ಷನ್ ರೈಲು ಶನಿವಾರ ಮಧ್ಯರಾತ್ರಿ 11:55ಕ್ಕೆ ವೆಲಂಕಣಿಯಿಂದ ಹೊರಡಲಿದ್ದು, ಮರುದಿನ ರಾತ್ರಿ 11:00ಗಂಟೆಗೆ ಮಡಗಾಂವ್ ತಲುಪಲಿದೆ.

2ಟಯರ್ ಎಸಿ 2ಕೋಚ್, 3ಟಯರ್ ಎಸಿ 6 ಕೋಚ್, 7 ಸ್ಲೀಪರ್ ಕೋಚ್ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ಹೊಂದಿರುವ ಈ ರೈಲಿಗೆ ಕಾರವಾರ, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಪಯ್ಯನೂರು, ಕಣ್ಣೂರು, ತಲ್ಲಚೇರಿ, ಕೋಝಿಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪುರ, ಈರೋಡ್, ಕರೂರು ಜಂಕ್ಷನ್, ತಿರುಚಿರಪಳ್ಳಿ ಜಂಕ್ಷನ್, ತಂಜಾವೂರು ಜಂಕ್ಷನ್, ತಿರುವಾಯೂರು ಜಂಕ್ಷನ್ ಹಾಗೂ ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ವಿಶೇಷ ರೈಲು ಸಂಚಾರ: ಚಳಿಗಾಲ ಹಾಗೂ ದೀಪಾವಳಿ ಸಂದರ್ಭದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲು ಗಳನ್ನು ಓಡಿಸಲಾಗುತ್ತಿದೆ. ಲೋಕಮಾನ್ಯ ತಿಲಕ್ ಮುಂಬಯಿ- ಕೊಚ್ಚುವೇಲಿ- ಲೋಕಮಾನ್ಯ ತಿಲಕ್ ನಡುವೆ ವಿಶೇಷ ಸಾಪ್ತಾಹಿಕ ರೈಲು ಸಂಚರಿಸಲಿದೆ. ಈ ರೈಲು ಅ.24, ಅ.31, ನ.7 ಹಾಗೂ ನ.14ರ ಗುರುವಾರದಂದು ಸಂಜೆ 4ಗಂಟೆಗೆ ಮುಂಬಯಿ ಲೋಕಮಾನ್ಯ ತಿಲಕ್‌ನಿಂದ ಹೊರಡಲಿದ್ದು, ಮರುದಿನ ರಾತ್ರಿ 8:45ಕ್ಕೆ ಕೊಚ್ಚುವೇಲಿ ತಲುಪಲಿದೆ.

ಮರುಪ್ರಯಾಣದಲ್ಲಿ ಈ ರೈಲು ಅ.26, ನ.2, ನ.9 ಹಾಗೂ ನ.16ರ ಶನಿವಾರ ಸಂಜೆ 4:20ಕ್ಕೆ ಕೊಚ್ಚುವೇಲಿಯಿಂದ ಹೊರಡಲಿದ್ದು ಮರುದಿನ ರಾತ್ರಿ 9:50ಕ್ಕೆ ಮುಂಬಯಿ ತಲುಪಲಿದೆ. 21 ಕೋಚ್‌ಗಳನ್ನು ಹೊಂದಿರುವ ಈ ರೈಲಿಗೆ ರಾಜ್ಯ ಕರಾವಳಿಯ ಕಾರವಾರ, ಕುಮಟಾ, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News