ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾ ಕಾಂಪ್ಲೆಕ್ಸ್‌ಗಾಗಿ ಸರಕಾರಕ್ಕೆ ಪ್ರಸ್ತಾಪ: ಡಾ.ರೋಶನ್ ಶೆಟ್ಟಿ

Update: 2024-09-04 12:08 GMT

ಉಡುಪಿ: ಉಡುಪಿಯ ಅಜ್ಜರಕಾಡು ಪರಿಸರವು ಕ್ರೀಡಾ ಹಬ್ ಆಗಿದ್ದು ಸರಕಾರದಿಂದ ಬಹಳಷ್ಟು ಅನುದಾನಗಳು ಕಾಲಕಾಲಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಖೇಲೊ ಇಂಡಿಯಾದ ಅಡಿಯಲ್ಲಿ ಅನುದಾನಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಅಜ್ಜರಕಾಡು ಮಾರ್ನಿಂಗ್ ಶೆಟಲ್ ಫ್ರೆಂಡ್ಸ್ ವತಿಯಿಂದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಸೆ.1ರಂದು ಏರ್ಪಡಿಸಲಾದ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ, ಬಿ.ಎಂ.ಹೆಗಡೆ, ಪುಟ್ಟರಾಜ್, ಹರೀಶ್ ಶೆಟ್ಟಿ, ಡಾ.ಭಾಸ್ಕರ್ ಎಂ.ಎನ್., ಜಿಲ್ಲಾ ಯೋಜನಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ತೂಕ ಮತ್ತು ಅಳತೆ ಮಾಪನ ಅಧಿಕಾರಿ ದೇವರಾಜ್, ಅಭಿಜಿತ್ ಕೋಟ್ಯಾನ್ ಭಾಗವಹಿಸಿದ್ದರು.

ಪಂದ್ಯಾಟದಲ್ಲಿ ಒಟ್ಟು ನಾಲ್ಕು ತಂಡಗಳ ೪೦ಆಟಗಾರರು ಭಾಗವಹಿಸಿದ್ದರು. ಪಂದ್ಯಕೂಟದಲ್ಲಿ ವಿಜೇತರಾಗಿ ರೋಹಿತ್ ಶೆಟ್ಟಿ ನಾಯಕತ್ವದ ಟೀಂ ಬ್ಲೇಸರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಟ್ರೋಫಿಯನ್ನು ಅಮೀತ್ ಪಡುಕೋಣೆ ನಾಯಕತ್ವದ ಟೀಂ ಅಲ್ಪಾ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾಶಿನಾಥ್ ಪೈ, ಸುಹೇಲ್ ಅಮೀನ್, ಡಾ.ಅತುಲ್, ಬ್ಯಾಡ್ಮಿಂಟನ್ ಕ್ಲಬ್ಬಿನ ಸದಸ್ಯರಾದ ಗಣೇಶ್ ಮಟ್ಟು ಮತ್ತು ಅಮಿತ್ ಪಡುಕೋಣೆ ಉಪಸ್ಥಿತರಿದ್ದರು. ನಂದಕಿಶೋರ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News