ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Update: 2024-09-01 12:57 GMT

ಉಡುಪಿ, ಸೆ.1: ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುದರಂಗಡಿ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಸಹಯೋಗ ದೊಂದಿಗೆ ಇತ್ತೀಚಿಗೆ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಿದ ಜಿಎಸ್‌ಬಿ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜದ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯ ಶೈಕ್ಷಣಿಕ ಶುಲ್ಕ ಪಾವತಿ, ಕುಟುಂಬ ಚೈತನ್ಯ ಯೋಜನೆಯಡಿ ಆಪದ್ದನವನ್ನು ವಿತರಿಸಲಾಯಿತು.

ಅಮ್ಚಿ ಮೆಲ್ಬೊರ್ನ್ ಕೊಂಕಣಿ ಅಸೋಸಿಯೇಷನ್ ಆಸ್ಟ್ರೇಲಿಯಾ ವತಿಯಿಂದ ಅಗತ್ಯವುಳ್ಳವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸ ಲಾಯಿತು. ದಿ ಪಡುಬಿದ್ರೆೆ ದೇವಿದಾಸ ಶರ್ಮ ದತ್ತಿನಿದಿಯಿಂದ ಕಾರ್ಕಳ ಭುವನೇಂದ್ರ ಪ್ರೌೌಢಶಾಲೆಯ 10ನೇ ತರಗತಿಯಲ್ಲಿ ಸಂಸ್ಕೃತದಲ್ಲಿ 125 ಪೂರ್ಣ ಅಂಕಗಳ ಸಾಧನೆಗೈದ 10 ವಿದ್ಯಾಾರ್ಥಿಗಳಿಗೆ ಗೌರವ ನಗದು ಪುರಸ್ಕಾರ ನೀಡಲಾಯಿತು. ಶೈಕ್ಷಣಿಕ ಮತ್ತು ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯ ಪೀಡಿತರಾದ ಸಾಬ್ರಕಟ್ಟೆೆ ಕಾಜರಳ್ಳಿ ನಾಗೇಶ್ ಪ್ರಭು ಅವರಿಗೆ ಮನೆ ಕಟ್ಟಿಸಿ ಕೊಡಲು ಯೋಜನೆ ಅಂಗವಾಗಿ 1 ಲಕ್ಷ ರೂ. ಆರಂಭಿಕ ನೆರವನ್ನು ಘೋಷಿಸಲಾಯಿತು. ಈ ವೇಳೆ ಗುರುದತ್ ಕಾಮತ್ ಮಂಗಳೂರು, ಡಾ.ಚಂದ್ರಕಾಂತ್ ಭಟ್, ರಾಜೇಂದ್ರ ಶೆಣೈ ಮಂಗಳೂರು, ವೈಜಯಂತಿ ಕಾಮತ್, ರಾಧಾಕೃಷ್ಣ ನಾಯಕ್ ಕೋಟ, ರಘುವೀರ್ ಶೆಣೈ ಸ್ಥಳದಲ್ಲಿಯೇ ದೇಣಿಗೆ ಘೋಷಿಸಿ ಒಟ್ಟು 5 ಲಕ್ಷ ರೂ. ಮನೆ ನಿರ್ಮಾಣಕ್ಕೆೆ ದೇಣಿಗೆ ನೀಡಿದರು.

ವಿದ್ಯಾಪೋಷಕ ವಿದ್ಯಾರ್ಥಿ ವೇತನ ನಿಧಿ ಅಧ್ಯಕ್ಷ ಸಿಎ ಎಸ್.ಎಸ್ ನಾಯಕ್, ಸಂಯೋಜಕ ವಿಜಯ ಕುಮಾರ್ ಶೆಣೈ, ಸಹ ಸಂಯೋಜಕ ಸುಬ್ರಹ್ಮಣ್ಯ ಪ್ರಭು ಮಂಗಳೂರು, ಅನಂತ ವೈದಿಕ ಕೇಂದ್ರದ ಪ್ರವರ್ತಕ ರಾಮಚಂದ್ರ ಅನಂತ ಭಟ್ ಉಪಸ್ಥಿತರಿದ್ದರು.

ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್.ವಿವೇಕಾನಂದ ಶೆಣೈ ಅವರು ಸ್ವಾಗತಿಸಿದರು. ಅಧ್ಯಕ್ಷ ಜಿ.ಸತೀಶ್ ಹೆಗ್ಡೆೆ ಕೋಟ ವಂದಿಸಿ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 2000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News