ಯುವಕ ನಾಪತ್ತೆ
Update: 2025-04-07 21:48 IST

ಉಡುಪಿ, ಎ.7: ನಗರದ ಬಿಲ್ಡಿಂಗ್ ಒಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ದೀಪಕ್ ನಿಶಾದ್ (26) ಎಂಬ ಯುವಕ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮದುವೆ ತಯಾರಿ ಮಾಡಿಕೊಳ್ಳುವ ಸಲುವಾಗಿ ಉಡುಪಿ ಯಿಂದ ತನ್ನ ಸ್ವಂತ ಊರಿಗೆ ಹೋಗುವುದಾಗಿ ತಿಳಿಸಿ ಹೋದವರು, ಈವರೆಗೂ ಊರಿಗೂ ಹೋಗದೇ, ಕೆಲಸದ ಸ್ಥಳಕ್ಕೂ ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 3 ಇಂಚು ಎತ್ತರ, ಗೋಧಿ ಮೈಬಣ್ಣ, ಹೊಂದಿದ್ದು, ಹಿಂದಿ ಹಾಗೂ ಭೋಜ್‌ಪುರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444ನ್ನು ಸಂಪರ್ಕಿಸ ಬಹುದು ಎಂದು ಮಣಿಪಾಲ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.