ಎ.8, 9ರಂದು ಸಾಗರ ಕವಚ ಅಣುಕು ಕಾರ್ಯಾಚರಣೆ

Update: 2025-04-07 21:21 IST
  • whatsapp icon

ಉಡುಪಿ: ಭಾರತೀಯ ತಟರಕ್ಷಣಾ ಪಡೆ(ಇಂಡಿಯನ್ ಕೋಸ್ಟ್‌ಗಾರ್ಡ್) ವತಿಯಿಂದ 2025ನೇ ಸಾಲಿನ ಮೊದಲನೇ ಆವೃತ್ತಿಯ ಸಾಗರ ಕವಚ ಅಣುಕು ಕಾರ್ಯಾಚರಣೆಯು ಎ.8 ಮತ್ತು 9ರಂದು ನಡೆಯಲಿದೆ.

ಈ ಕಾರ್ಯಾಚರಣೆಯಲ್ಲಿ ಪಾಲುದಾರರಾದ ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಸಿಐಎಸ್‌ಎಫ್, ಮೀನುಗಾರಿಕೆ ಇಲಾಖೆ, ಬಂದರು ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಗಳು ಭಾಗವಹಿಸಲಿವೆ.

ಈ ಅಣಕು ಕಾರ್ಯಾಚರಣೆಯ ಭಾಗವಾಗಿ ವಿಧ್ವಂಸಕ ಕೃತ್ಯದ ಅಣುಕು ಪ್ರದರ್ಶನ ನಡೆಸಲು ಪ್ರಯತ್ನಿ ಸುವ ಹಾಗೂ ಅದನ್ನು ತಡೆಗಟ್ಟುವಲ್ಲಿ ಕರಾವಳಿ ತೀರದ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಇಲಾಖೆಗಳೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಈ ಕಾರಾಚರಣೆಯು ಕರ್ನಾಟಕ ಕರಾವಳಿ ತೀರ ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸದೃಡಗೊಳಿಸಲು ಸಹಕಾರಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಇಂಡಿಯನ್ ಕೋಸ್ಟ್‌ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಿರಂತರವಾಗಿ 36 ಗಂಟೆಗಳ ಕಾಲ ಗಸ್ತು ಕಾರ್ಯಾಚರಣೆಯನ್ನು ಬೋಟುಗಳ ಮೂಲಕ ಕರ್ನಾಟಕ ಕರಾವಳಿ ತೀರದ ಉದ್ದಕ್ಕೂ ನಿರ್ವಹಿಸಲಿದ್ದು ಈ ಬಗ್ಗೆ ವಿವರವನ್ನು ಕರಾವಳಿ ತೀರದ ಸಾರ್ವಜನಿಕರ ಹಾಗೂ ಮೀನುಗಾರರ ಗಮನಕ್ಕೆ ತರಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳು ಕೂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News