ಶಿಕ್ಷಣದಿಂದ ಮಕ್ಕಳ ಬದುಕು ಹಸನಾಗಲು ಸಾಧ್ಯ: ಸಚಿವ ಡಾ.ಎಂ.ಸಿ.ಸುಧಾಕರ್

ಕಾಪು, ಎ.7: ಶಿಕ್ಷಣ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅದಕ್ಕೆ ಮಕ್ಕಳಿಗೆ ಶಿಕ್ಷಣ ಎಂಬ ಆಯುಧವನ್ನು ಕೊಡಬೇಕು. ಆಗ ಮಕ್ಕಳ ಬದುಕು ಹಾಗೂ ಭವಿಷ್ಯ ಹಸನಾಗುತ್ತದೆ. ಕೃತಕ ಬುದ್ದಿಮತ್ತೆ(ಆರ್ಟಿಫಿಶನ್ ಇಂಟೆಲಿಜೆನ್ಸ್) ಇಂದು ನಮ್ಮ ಬದುಕಿನ ಪ್ರತಿ ಹಂತದಲ್ಲೂ ಬಳಕೆ ಆಗುತ್ತಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲಿನ ಎರಡನೇ ಅಂತಸ್ತನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಿಕ್ಷಣ ವಿಚಾರದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಅವಿಭಜಿತ ದ.ಕ. ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾ ಗಿದೆ. ಶಿಕ್ಷಣ ಇಂದಿನ ವ್ಯವಸ್ಥೆಯಲ್ಲಿ ಬಹಳ ಅತೀ ಅಗತ್ಯವಾಗಿದೆ. ಆದುದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆ ಯಬೇಕಾಗಿದೆ. ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕು. ಅದರಿಂದ ಯಾರು ವಂಚಿತರಾಗ ಬಾರದು ಎಂಬ ನಿಟ್ಟಿನಲ್ಲಿ ಸರಕಾರ ಕೂಡ ಹಲವು ಕಾರ್ಯಕ್ರಮ ಹಮ್ಮಿ ಕೊಂಡಿವೆ ಎಂದರು.
ವಿದ್ಯಾರ್ಥಿಗಳು ಮೊದಲು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳಬೇರಕು. ತನ್ನಲ್ಲಿರುವ ಪ್ರತಿಭೆ ಹೊರಬೇಕಾದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ಆಗ ಮಾತ್ರ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದ ಅವರು, ಡಿಕೆಎಸ್‌ಸಿ ಸಂಸ್ಥೆಯ ದೂರದೃಷ್ಟಿ ಬಳಹಷ್ಟಿದೆ. ಇದನ್ನು ಇನ್ನಷ್ಟು ವಿಸ್ತಾರ ಆಗಬೇಕಿದೆ. ವಿಶ್ವವಿದ್ಯಾನಿಲಯ ಆಗಬೇಕು ಎಂಬ ಕನಸು ನನಸಾಗಲಿ ಎಂದು ಹಾರೈಸಿದರು.
ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಡಿಕೆಎಸ್‌ಸಿ ನಂಸ್ಥೆಯ ಮೂಲಕ ಸಮಾಜವನ್ನು ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಮಾದರಿಯಾಗಿದೆ. ಶಿಕ್ಷಣದ ಜತೆಗೆ ತಾಳ್ಮೆ, ಪ್ರೀತಿ, ವಿಶ್ವಾಸ, ಸಮಾನತೆ ಇರಬೇಕು. ಈ ಗುಣವನ್ನು ಮನೆಯಿಂದಲೇ ಬೆಳೆಸಬೇಕಾಗಿದೆ. ಸಮುದಾಯಕ್ಕೆ ಮತ್ತು ಸಮಾಜಕ್ಕೆ ನೂರಾರು ಸಮಸ್ಯೆಗಳಿವೆ. ಇದೆಲ್ಲವನ್ನೂ ಎದುರಿಸುವ ಶಕ್ತಿ ಸುಶಿಕ್ಷಿತ ಸಮಾಜದಂದ ಮಾತ್ರ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಳ್ ಕುಂಬೋಳ್ ವಹಿಸಿದ್ದರು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯ್ದಿನ್ ಬಾವ, ಯು.ಟಿ.ಇಫ್ತಿಕಾರ್ ಫರೀದ್, ಅನಿವಾಸಿ ಉದ್ಯಮಿಗಳಾದ ಅಲ್ ಮುಝೈನ್ ಸಿಇಓ ಶರೀಫ್ ಬೋಳಾರ್, ಆ್ಯಂಪ್ಲಿಟ್ಯುಡ್ ಕಂಪೆನಿಯ ನಿರ್ದೇಶಕರಾದ ಮುಹಮ್ಮದ್ ಶಬೀರ್, ಜುನೈದ್ ಅಹ್ಮದ್, ಫತೇಹಲ್ ಜುಬೇಲ್ ಕಂಪೆನಿಯ ಸಿಇಓ ಮುಹಮ್ಮದ್ ಮುಸ್ತ್ತಾಖ್ ಅಹ್ಮದ್ ಅವರ ಪ್ರತಿನಿಧಿ ಶಭೀರ್, ಮಖಾವಿ ಕಂಪೆನಿಯ ಸಿಇಓ ಶಕೀಲ್ ಅಹ್ಮದ್, ಡಾ.ಅಬ್ದುಲ್ ಶಕೀಲ್ ಜಿದ್ದಾ, ಮುಕ್ಕಾ ಸೀ ಫುಡ್ ಮಾಲಕ ಹಾರೀಸ್ ಮುಕ್ಕಾ, ಸುಲ್ತಾನ್ ಗೋಲ್ಡ್ ಮಾಲಕ ಅಬ್ದುರ‌್ರವೂಫ್, ಹೋಮ್ ಪ್ಲಸ್ ಮಾಲಕ ಆಸೀಫ್, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರ್, ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಮೌಲಾ, ಮೂಳೂರು ಜುಮಾ ಮಸೀದ್ ಅಧ್ಯಕ್ಷ ಹಾಜಿ ಅಬೂ ಮುಹಮ್ಮದ್, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷ ಶಭಿ ಅಹಮದ್ ಕಾಜಿ, ಡಿಕೆಎಸ್‌ಸಿ ಕೇಂದ್ರ ಸಮಿತಿಯ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್, ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ಯುಎಇ ಅಧ್ಯಕ್ಷ ಎಂ.ಇ.ಮೂಳೂರು, 30 ವಿಷನ ಚೆಯರ್‌ಮೆನ್ ಹಾತಿಂ ಕೂಳೂರು, ಆಡಳಿತಾಧಿಕಾರಿ ಪ್ರೊ.ಯೂಸುಫ್ ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ಸಮಿತಿಯ ಸಯ್ಯದ್ ತಂಙಳ್ ಉಚ್ಚಿಲ, ಫಾರೂಕ್ ಅಹ್ಮದ್ ಕರ್ನಿರೆ, ಮನ್ಸೂರ್ ಕೃಷ್ಣಾಪುರ, ಇಂಜಿನಿಯರ್ ಜುನೈದ್ ಅಬ್ದುಲ್ ರಝಾಕ್, ಕ್ರಿಡಾಪಟು ಅಬೂ ವಾರಿಕ್, ಹಾಫಿಝ್ ಮುಅವಿಝ್ ಅಹ್ಮದ್ ನವವಿ ಅವರನ್ನು ಅಭಿನಂದಿಸಲಾಯಿತು.
ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರ ಮುನಾವರ್ ಝಮಾ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡಿದರು. ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್‌ನ ಪ್ರಾಂಶುಪಾಲ ಹಬೀಬುರ‌್ರಹ್ಮಾನ್ ಸ್ವಾಗತಿಸಿದರು. ಡಿಕೆಎಸ್‌ಸಿ ಕೇಂದ್ರ ಸಮಿತಿಯ ಕಮ್ಯುನಿಕೇಷನ್ ಕಾರ್ಯದರ್ಶಿ ಕೆ.ಎಚ್.ಮುಹಮ್ಮದ್ ರಫೀಕ್ ಸೂರಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ ಅರಮೆಕ್ಸ್ ವಂದಿಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ ಹಾಗೂ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.
