ದ್ವಿತೀಯ ಪಿಯು ಪರೀಕ್ಷೆ: ಕುಕ್ಕುಂದೂರು ಕೆ.ಎಂ.ಇ.ಎಸ್. ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

ಕಾರ್ಕಳ: ಕುಕ್ಕುಂದೂರಿನ ಕೆ.ಎಂ.ಇ.ಎಸ್. ಪದವಿ ಪೂರ್ವ ಕಾಲೇಜು ಪ್ರಸಕ್ತ (2024-25) ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ 100 ಶೇ. ಹಾಗೂ ವಾಣಿಜ್ಯ ವಿಭಾಗದಲ್ಲಿ 95 ಶೇ. ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ ಒಟ್ಟು 77 ವಿದ್ಯಾರ್ಥಿಗಳ ಪೈಕಿ 75 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 27 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 43 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಐವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 585(97.5 ಶೇ.) ಅಂಕಗಳನ್ನು ಗಳಿಸಿರುವ ಪೃಥ್ವಿ ಆಚಾರ್ಯ ಮತ್ತು ವಾಣಿಜ್ಯ ವಿಭಾಗದಲ್ಲಿ 588(98 ಶೇ.) ಅಂಕಗಳನ್ನು ಗಳಿಸಿರುವ ಶ್ರೇಷ್ಠಾ ಕೆ. ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ತಲಾ 578(96.33 ಶೇ.) ಅಂಕಗಳನ್ನು ಗಳಿಸಿರುವ ಅಂಬಿಕಾ ದಾಮೋದರ್ ಪಟಾಗರ್ (ವಿಜ್ಞಾನ ವಿಭಾಗ) ಮತ್ತು ಆಯಿಶಾ ಅಝ್ಮೀನಾ(ವಾಣಿಜ್ಯ ವಿಭಾಗ) ದ್ವಿತೀಯ ಸ್ಥಾನಿಯಾಗಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.