ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2023-07-21 15:38 GMT

ಕಾಪು, ಜು.21: ಇನ್ನಂಜೆ ರೈಲ್ವೆ ನಿಲ್ದಾಣದ ಸಮೀಪದ ಹಳಿಯಲ್ಲಿ ಸುಮಾರು 45ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಜು.20 ರಂದು ರಾತ್ರಿ ವೇಳೆ ಪತ್ತೆಯಾಗಿದೆ.

ಮೃತದೇಹದ ತಲೆಯ ಭಾಗ ಸಂಪೂರ್ಣವಾಗಿ ಜಜ್ಜಿದ್ದು, ಗುರುತಿಸಲು ಸಾಧ್ಯ ವಾಗುತ್ತಿಲ್ಲ. ಮೃತ ವ್ಯಕ್ತಿಯು ಕಪ್ಪು ಬಣ್ಣದ ಉದ್ದನೆಯ ಗೆರೆಗಳಿರುವ ಬಿಳಿ ಬಣ್ಣದ ಅಂಗಿ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರು ರೈಲಿನಿಂದ ಕೆಳಗಡೆ ಆಕಸ್ಮಿಕವಾಗಿಯೋ ಬಿದ್ದು ಅಥವಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News