ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ

Update: 2023-12-24 12:59 GMT

ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಮಂಗಳೂರಿನ ನೂತನ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ನೂರುಲ್ ಈಮಾನ್ ಮತ್ತು ಅಧ್ಯಕ್ಷರಾದ ಬಹು. ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ಅಲ್ ಹೈದ್ರೋಸಿ ತಂಙಳ್ ಕುಂಬೋಲ್ ರವರ ದುಆದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ ಹಾತಿಂ ಹಾಜಿ ಕೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾಯದರ್ಶಿ ಶಂಸುದ್ದೀನ್ ಬಳ್ಕುಂಜೆ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ ಮಾತನಾಡಿ, ಡಿ.ಕೆ.ಎಸ್.ಸಿ. ಬೆಳೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಅಧ್ಯಕ್ಷರಾದ ಮುಖ್ತಾರ್ ತಂಙಳ್ ಅಧ್ಯಕ್ಷೀಯ ಭಾಷಣ ಮಾಡಿ, ಸಂಘಟನೆಯ ಧ್ಯೇಯೋದ್ದೇಶವನ್ನು ವಿವರಿಸುತ್ತಾ ತಮ್ಮ ಮಕ್ಕಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕು. ವರ್ತಮಾನ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಅದೆಷ್ಟೋ ಅಹಿತಕರ ಘಟನೆಗಳು ನಡೆಯುತ್ತಿದ್ದು ನಾವೆಲ್ಲರೂ ಜಾಗರೂಕರಾಗಬೇಕು ಎಂಬ ಉಪದೇಶ ನೀಡಿದರು.

ಹಳೇ ಸಮಿತಿಯನ್ನು ಬರ್ಕಾಸ್ತುಗೊಳಿಸಿದ ಬಳಿಕ ಕೇಂದ್ರ ಸಮಿತಿಯ ಮಾಜಿ ಸದಸ್ಯ ಫಾರೂಕ್ ಹಾಜಿ ಕರ್ನಿರೆಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರು : ಅಸ್ಸಯ್ಯಿದ್ ಅಲ್ ಹಾಜ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್

ಅಧ್ಯಕ್ಷರು : ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್.

ಕಾರ್ಯಾಧ್ಯಕ್ಷರು : ಹುಸೈನ್ ಹಾಜಿ ಕಿನ್ಯ

ಪ್ರಧಾನ ಕಾರ್ಯದರ್ಶಿ : ಶಂಸುದ್ದೀನ್ ಬಳ್ಕುಂಜೆ

ಉಪಾಧ್ಯಕ್ಷರುಗಳು : ಮೊಯ್ದು ಹಾಜಿ ಬಿಲೀಫ್, ಬಶೀರ್ ಕೈಕಂಬ, ಇಸ್ಮಾಯಿಲ್ ಹಾಜಿ ಕಿನ್ಯ

ಕಾರ್ಯದರ್ಶಿಗಳು: ಅಹ್ಮದ್ ಶರೀಫ್ ಬಜ್ಪೆ, ಮುಹಮ್ಮದ್ ಇಸ್ಮಾಯಿಲ್ (ಮುನ್ನ), ಯು. ಡಿ. ಇಬ್ರಾಹಿಂ ಉಳ್ಳಾಲ

ಕೋಶಾಧಿಕಾರಿ : ಝೈನುದ್ದೀನ್ ಮುಕ್ವೆ

ಲೆಕ್ಕ ಪರಿಶೋಧಕರು : ಅನ್ವರ್ ಹುಸೈನ್ ಗೂಡಿನಬಳಿ, ಫಾರೂಕ್ ಹಾಜಿ ಕರ್ನಿರೆ

ಸಂಘಟಕರು : ಜಿ.ಎಂ. ಮುಹಮ್ಮದ್ ಕುಂಞಿ, ಏ.ಎಚ್. ಅಬ್ದುಲ್ ಖಾದರ್ ಪಡುಬಿದ್ರಿ, ಎಂ.ಎಂ.ಕುಂಞಿ, ಮನ್ಸೂರ್ ಕೃಷ್ಣಾಪುರ, ಇ.ಕೆ. ಇಬ್ರಾಹಿಂ ಹಾಜಿ ಕಿನ್ಯ, ಅಶ್ರಫ್ ಬೆಳಪು, ಅಬ್ದುಲ್ ಹಮೀದ್ ಸುಳ್ಯ

ಸಲಹೆಗಾರರು : ಉಮರ್ ಹಾಜಿ ಮುಕ್ವೆ, ಮುಹಮ್ಮದ್ ಅಲ್ ಖಾಸಿಮಿ ಅಳಕೆ ಮಜಲು, ಅಬ್ಬಾಸ್ ಹಾಜಿ ಎಲಿಮಲೆ, ಅಬ್ದುಲ್ ರಹಿಮಾನ್ ಹಾಜಿ ಮಣಿಪಾಲ್, ಮುಹಮ್ಮದ್ ರಫೀಕ್ ಪಡುಬಿದ್ರೆ

ಸಂಚಾಲಕರು : ಬದ್ರುದ್ದೀನ್ ಹಾಜಿ ಬಜ್ಪೆ.

ಸದಸ್ಯರು: ಅಬ್ದುಲ್ಲ ಕುವೆಂಜ, ಉಮರ್ ಫಾರೂಕ್ ಸುರತ್ಕಲ್, ಅಬ್ದುಲ್ ರಝಾಕ್ ಮಿನಾಝ್, ಸಂಶುದ್ದೀನ್ ಕೋಡಿ, ಹಂಝ ಕನ್ನಂಗಾರ್, ನಝೀರ್ ಕನ್ನಂಗಾರ್, ಪುತ್ತುಮೋನು ಕನ್ನಂಗಾರ್, ಕೌಸರ್ ಪಡುಬಿದ್ರಿ, ಮೊಯ್ದಿನ್ ಪಿ.ಎ, ಹಸನ್ ಬಾವ ಪಡುಬಿದ್ರಿ, ಫಿರೋಝ್ ಪಡುಬಿದ್ರಿ, ಅಬ್ದುಲ್ ಅಝೀಝ್ ಪಡುಬಿದ್ರಿ, ಇಬ್ರಾಹಿಂ ಪಡುಬಿದ್ರಿ, ಝಕರಿಯಾ ಕೆಮ್ಮಾರ, ಸಿದ್ದೀಕ್, ಇಸ್ಮಾಯಿಲ್ ಶಾಫಿ ವಿಟ್ಲ, ಸಿದ್ಧೀಕ್ ದೇರಳಕಟ್ಟೆ, ನಖೀಬ್ ದೇರಳಕಟ್ಟೆ, ಅಬ್ದುಲ್ ಖಾದರ್ ವೆಲ್ಕಂಮ, ಮುಹಮ್ಮದ್ ಅನ್ಸಾರ್, ಅಶ್ರಫ್, ಮೊಯ್ದಿನ್ ಹಾಜಿ, ಅಬೂಬಕರ್ ಬಿ.ಎಚ್.ಬಿ, ಅಬ್ದುಲ್ ರಹ್ಮಾನ್ ಪ್ಯಾರಿಸ್, ಮುಹಮ್ಮದ್ ರಫೀಖ್, ಶರೀಫ್ ಬೆಳಪು, ಯೂಸುಫ್ ಕರಂಬಾರ್, ಅಬ್ದುಲ್ ಖಾದರ್ ಸಕಲೇಶಪುರ, ಅಲಿ ಅಬ್ಬಾಸ್ ಸೂರಲ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.

ಹಾತಿಂ ಹಾಜಿ ಕೂಳೂರು ನೂತನ ಸಮಿತಿಗೆ ಶುಭ ಹಾರೈಸುತ್ತಾ ಜಿಲ್ಲಾ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ಶ್ಲಾಘಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷ‌ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಅವರಿಗೆ ಇತ್ತೀಚೆಗೆ ಅವೇಲತ್ತ್ ತಂಙಳ್ ಪ್ರಶಸ್ತಿ ಲಭಿಸಿದ್ದಕ್ಕಾಗಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದದ ತಂಙಳ್ ರವರು, ಡಿ.ಕೆ.ಎಸ್.ಸಿ.ಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ತಾಳ್ಮೆಯಿಂದ, ಉತ್ತಮ ನಿಯ್ಯತ್ತಿನೊಂದಿಗೆ ಕಾರ್ಯ ನಿರ್ವಹಿಸಬೇಕಿದೆ ಎನ್ನುತ್ತಾ ಡಿ.ಕೆ.ಎಸ್.ಸಿ.ಗಾಗಿ ಈ ಹಿಂದೆ ದುಡಿದ ಸರ್ವರನ್ನು ಶ್ಲಾಘಿಸಿದರು.

ಜಿಲ್ಲಾ ನೂತನ ಸಮಿತಿ ಹಾಗೂ ಸರ್ವ ಡಿ.ಕೆ.ಎಸ್.ಸಿ ಸದಸ್ಯರು ಒಗ್ಗೂಡಿ ಆದಷ್ಟು ಬೇಗ ಈ ಕಚೇರಿಯನ್ನು ನಮ್ಮದಾಗಿಸಬೇಕು. ಇದಕ್ಕಾಗಿ ಎಲ್ಲಾ ಸದಸ್ಯರು ಶಕ್ತಿ ಮೀರಿ ಶ್ರಮಿಸಬೇಕು ಎನ್ನುತ್ತಾ ನೆರೆದ ಎಲ್ಲರಿಗೂ, ಮರಣ ಹೊಂದಿದ ಸದಸ್ಯರಿಗೂ ದುಆ ಮಾಡಿದರು.

ಕೇಂದ್ರ ಸಮಿತಿಯ ನಾಯಕರು, ಜಿಲ್ಲಾ ಸಮಿತಿಯ ನಾಯಕರು, ಸದಸ್ಯರು, ಘಟಕಗಳ ನಾಯಕರು, ಸದಸ್ಯರು, ಮರ್ಕಝ್ ಸಮಿತಿಯ ನಾಯಕರು, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News