ಉಡುಪಿ: ಜೈಂಟ್ಸ್ ಗ್ರೂಪ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

Update: 2024-08-04 09:17 GMT

ಉಡುಪಿ: ಜೈಂಟ್ಸ್ ಗ್ರೂಪ್ ವತಿಯಿಂದ ಸೈಂಟ್ ಸಿಸಿಲಿ ಪ್ರೌಢಶಾಲೆಯ ಸಹಯೋಗದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಯೋಮಿತಿ ನಾಯಕತ್ವ, ಮೌಲ್ಯ ಏಕೀಕರಣ ಮತ್ತು ಮಾನವೀಯತೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಡಾ.ಸುಧೀರ್ ರಾಜ್ ಹಾಗೂ ಕೆ.ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕೆ ಎಸ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಸೈಂಟ್ ಸಿಸಿಲಿ ಪ್ರೌಢಶಾಲೆಯ ಸಿಸ್ಟರ್ ಪ್ರೀತಿ ಕ್ರಾಸ್ಟೊ ಎಚ್.ಎಂ, ದಿನಕರ್ ಅಮೀನ್, ಜೈಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಕೇಂದ್ರ ಸಮಿತಿ ಸದಸ್ಯ, ಉಡುಪಿಯ ಜೈಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್, ಉಪಾಧ್ಯಕ್ಷ ಮತ್ತು ಯೋಜನಾ ಸಂಯೋಜಕ ವಿನ್ಸೆಂಟ್ ಸಲ್ಡಾನಾ, ಆಡಳಿತ ನಿರ್ದೇಶಕ ವಾದಿರಾಜ್ ಸಾಲಿಯಾನ್, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಜಗದೀಶ್ ಅಮೀನ್ ಮಾಜಿ ಅಧ್ಯಕ್ಷರು, ಯುವ ಜೈಂಟ್ ದೀಪಾ ದಿವಾಕರ ಪೂಜಾರಿ ಉಪಸ್ಥಿತರಿದ್ದರು.

ಡಯಾನಾ ಸುಪ್ರಿಯಾ ಸಮಾಜ ಸೇವಕಿ ಉಡುಪಿಯ ಜೈಂಟ್ಸ್ ಗ್ರೂಪ್‌ಗೆ ಸೇರ್ಪಡೆಗೊಂಡರು ಮತ್ತು ಜಿಡಬ್ಲ್ಯೂಎಫ್‌ ನ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್ ಅವರು ಪ್ರಮಾಣ ವಚನ ಬೋಧಿಸಿ, ಆಗಸ್ಟ್ ಕೂಟಕ್ಕೆ ಹೊಸ ಸದಸ್ಯರನ್ನು ಪರಿಚಯಿಸಿದರು.

Delete Edit
Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News