ಉಡುಪಿ: ಅಂತರ್ ಜಿಲ್ಲಾ ಮನೆ ಕಳ್ಳತನ ಆರೋಪಿಯ ಬಂಧನ; ಸೊತ್ತು ವಶಕ್ಕೆ

Update: 2023-11-28 15:15 GMT

ಉಡುಪಿ, ನ.28: ಮನೆ ಕಳ್ಳತನ ಪ್ರರಣಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಮನೆಗಳ್ಳ ಆರೋಪಿಯನ್ನು ಪೊಲೀಸರು ನ.28ರಂದು ಕಾಪು ಮಲ್ಲಾರಿನಲ್ಲಿ ಬಂಧಿಸಿದ್ದಾರೆ.

ಮಲ್ಲಾರು ಗ್ರಾಮದ ತೌಸೀಫ್ ಅಹಮದ್(34) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ್ದ ಒಟ್ಟು 9,00,500ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

76-ಬಡಗುಬೆಟ್ಟು ಗ್ರಾಮ ಶ್ರೀಮತಿ ಎಂಬವರ ಮನೆಗೆ ಜೂ.30ರಂದು ನುಗ್ಗಿದ ಕಳ್ಳರು ಒಟ್ಟು 188 ಗ್ರಾಂ ತೂಕದ ಚಿನ್ನಾಭರಣ ಹಾಗೂ 15,500ರೂ. ನಗದು ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್., ಎಸ್ಸೈಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್.ಶಿವಕುಮಾರ್, ರಿಯಾಝ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರರವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಈತನ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆ ಕಡೆಗಳಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News