ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿಸಲು ಒತ್ತಾಯ
ಕುಂದಾಪುರ, ಜು.31: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡಾ ಗ್ರಾಪಂ ವ್ಯಾಪ್ತಿಯಲ್ಲಿರುವ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಾಡ, ಬಡಾಕೆರೆ, ಹಡವು, ಸೇನಾಪುರ ಹಾಗೂ ಹತ್ತಿರದ ಮೊವಾಡಿ ಗ್ರಾಮದ ಜನರಿಗೆ ಸಿಬ್ಬಂದಿಗಳ ಕೊರತೆ ನಡುವೆಯು ಆರೋಗ್ಯ ಸೇವೆ ಒದಗಿಸು ತ್ತಿದ್ದು ದಿನಂಪ್ರತಿ ನೂರಾರು ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುತ್ತಿ ದ್ದಾರೆ. ಈ ಭಾಗದ ಜನರ ಆಶಾಕಿರಣವಾಗಿರುವ ಆಸ್ಪತ್ರೆ ತಾಲ್ಲೂಕು ಕೇಂದ್ರ ದಿಂದ 20ಕಿಲೋ ಮೀಟರ್ ದೂರ ಇದ್ದು ಆಸ್ಪತ್ರೆ ಸಿಬ್ಬಂದಿಗಳ ಕೊರತೆಯಿಂದ ಸಮರ್ಪಕ ಸೇವೆ ನೀಡಲು ತೊಡಕಾಗಿದೆ.
ಪ್ರಸ್ತುತ ಇಲ್ಲಿ ಸುಮಾರು 8 ಹುದ್ದೆಗಳು ಖಾಲಿ ಇದ್ದು ಈ ಬಗ್ಗೆ ಆರೋಗ್ಯ ಇಲಾಖೆ ಜಿಲ್ಲಾಡಳಿತ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರಾದ ಸುಬ್ರಹ್ಮಣ್ಯ ಆಚಾರ್ ಪತ್ರಿಕಾ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.